ಮಂಗಳೂರು ತೋಕೂರು- ಡಾ.ಅಂಬೇಡ್ಕರ್ ನಗರ ನಡುವೆ ವಿಶೇಷ ರೈಲು

ಸಾಂದರ್ಭಿಕ ಚಿತ್ರ
ಉಡುಪಿ, ಡಿ.15: ಕ್ರಿಸ್ಮಸ್ ಹಾಗೂ ಹೊಸವರ್ಷದ ಜನರ ವಿಶೇಷ ಬೇಡಿಕೆಯಂತೆ ಮಂಗಳೂರು ಸಮೀಪದ ತೋಕೂರು ಹಾಗೂ ಮಧ್ಯಪ್ರದೇಶದ ಇಂದೋರ್ ಸಮೀಪದ ಡಾ.ಅಂಬೇಡ್ಕರ್ ನಗರ ನಡುವೆ ಪಶ್ಚಿಮ ರೈಲ್ವೆಯ ಸಹಕಾರದೊಂದಿಗೆ ವಿಶೇಷ ರೈಲನ್ನು ಓಡಿಸಲು ಕೊಂಕಣ ರೈಲ್ವೆ ನಿರ್ಧರಿಸಿದೆ.
ರೈಲು ನಂ.09304 ಡಾ.ಅಂಬೇಡ್ಕರ್ ನಗರ ಹಾಗೂ ತೋಕೂರು ನಡುವಿನ ವಿಶೇಷ ಟಿಕೇಟ್ ದರದ ವಿಶೇಷ ರೈಲು, ಡಿ.21 ಹಾಗೂ 28ರ ರವಿವಾರದಂದು ಸಂಜೆ 4:30ಕ್ಕೆ ಡಾ.ಅಂಬೇಡ್ಕರ್ ನಗರದಿಂದ ಹೊರಡಲಿದ್ದು, ಮೂರನೇ ದಿನ ಬೆಳಗಿನ ಜಾವ 3:00ಗಂಟೆಗೆ ತೋಕೂರು ತಲುಪಲಿದೆ.
ಅದೇ ರೀತಿ ರೈಲು ನಂ.09303 ವಿಶೇಷ ದರದ ವಿಶೇಷ ರೈಲು ಡಿ.23 ಹಾಗೂ 30ರ ಮಂಗಳವಾರದಂದು ಬೆಳಗಿನ ಜಾವ 4:45ಕ್ಕೆ ತೋಕೂರು ನಿಲ್ದಾಣದಿಂದ ಪ್ರಯಾಣ ಪ್ರಾರಂಭಿಸಲಿದ್ದು, ಮರುದಿನ ಅಪರಾಹ್ನ 3:30ಕ್ಕೆ ಡಾ.ಅಂಬೇಡ್ಕರ್ ನಗರ ರೈಲು ನಿಲ್ದಾಣ ತಲುಪಲಿದೆ.
ಈ ರೈಲಿಗೆ ಇಂದೋರ್ ಜಂಕ್ಷನ್, ದಿವಾಸ್, ಉಜ್ಜೈನಿ ಜಂಕ್ಷನ್, ನಗ್ಡಾ ಜಂಕ್ಷನ್, ರಟ್ಲಂ ಜಂಕ್ಷನ್, ವಡೋದರಾ ಜಂಕ್ಷನ್, ಬರೂಚಾ ಜಂಕ್ಷನ್, ಸೂರತ್, ವಾಪಿ, ವಸೈ ರೋಡ್, ಭಿವಂಡಿ ರೋಡ್, ಪನ್ವೇಲ್, ರೋಹಾ, ಖೇಡ್, ಚಿಪ್ಳುಣ್, ಸಂಗಮೇಶ್ವರ ರೋಡ್, ರತ್ನಗಿರಿ, ರಾಜಪುರ ರೋಡ್, ವೈಭವವಾಡಿ ರೋಡ್, ಕಂಕವಲ್ಲಿ, ಸಿಂಧುದುರ್ಗ, ಕುಡಾಲ್, ಸಾವಂತವಾಡಿ ರೋಡ್, ಥೀವಿಂ, ಕರ್ಮಾಲಿ, ಮಡಗಾಂವ್ ಜಂಕ್ಷನ್, ಕಾಣಕೋಣ, ಕಾರವಾರ, ಅಂಕೋಲ, ಗೋಕರ್ಣ ರೋಡ್, ಕುಮಟಾ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್ ಬೈಂದೂರು, ಕುಂದಾಪುರ, ಉಡುಪಿ, ಮೂಲ್ಕಿ ಹಾಗೂ ಸುರತ್ಕಲ್ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.
ಈ ವಿಶೇಷ ರೈಲು ಒಟ್ಟು 22 ಎಲ್ಬಿಎಚ್ ಕೋಚ್ ಗಳನ್ನು ಹೊಂದಿರುತ್ತದೆ. ಇವುಗಳಲ್ಲಿ 3ಟಯರ್ ಎಸಿ ಕೋಚ್ 19, 3ಟಯರ್ ಎಸಿ ಇಕಾನಮಿ ಕೋಚ್ ಒಂದು, ಜನರೇಟರ್ ಕಾರ್ ಎರಡು ಕೋಚ್ಗಳಿವೆ. ಈ ವಿಶೇಷ ರೈಲು ಒಟ್ಟು 22 ಎಲ್ಬಿಎಚ್ ಕೋಚ್ಗಳನ್ನು ಹೊಂದಿರುತ್ತಿದೆ. ಇವುಗಳಲ್ಲಿ 3ಟಯರ್ ಎಸಿ ಕೋಚ್ 19, 3ಟಯರ್ ಎಸಿ ಇಕಾನಮಿ ಕೋಚ್ ಒಂದು, ಜನರೇಟರ್ ಕಾರ್ ಎರಡು ಕೋಚ್ ಗಳಿವೆ.
ರೈಲು ನಂ.09303ಗೆ ಟಿಕೇಟ್ ಬುಕ್ಕಿಂಗ್ ಡಿ.14ರಿಂದ ಪ್ರಾರಂಭ ಗೊಂಡಿದೆ. ಎಲ್ಲಾ ಪಿಆರ್ಎಸ್, ಇಂಟರ್ನೆಟ್ ಹಾಗೂ ಐಆರ್ಸಿಟಿಸಿ ವೆಬ್ಸೈಟ್ಗಳಲ್ಲಿ ಸೀಟುಗಳನ್ನು ಕಾದಿರಿಸಬಹುದಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.







