ಮಣಿಪಾಲ: ಧಾನ್ಯಗಳಲ್ಲಿ ಮೂಡಿಬಂದ ಪ್ರಧಾನಿ ಮೋದಿ ಚಿತ್ರ

ಉಡುಪಿ: ನಾಳೆ ಉಡುಪಿಗೆ ಆಗಮಿಸುತ್ತಿರುವ ಪ್ರದಾನಿ ನರೇಂದ್ರ ಮೋದಿ ಅವರನ್ನು ವಿಶಿಷ್ಟವಾಗಿ ಸ್ವಾಗತಿಸುವ ಉದ್ದೇಶದಿಂದ ಕಲಾವಿದ ಶ್ರೀನಾಥ್ ಮಣಿಪಾಲ್, ಅವರ ವಿಶಿಷ್ಟವಾದ ಕಲಾಕೃತಿಯೊಂದನ್ನು ಧಾನ್ಯಗಳಲ್ಲಿ ರಚಿಸಿದ್ದಾರೆ.
ಈ ಕಲಾಕೃತಿಯನ್ನು ರಚಿಸಲು ಅವರು ಸುಮಾರು 20 ಕೆ.ಜಿ. ವಿವಿಧ ಧಾನ್ಯಗಳನ್ನು ಬಳಸಿದ್ದಾರೆ. ವಿವಿಧ ವರ್ಣದ ಧಾನ್ಯಗಳನ್ನು ಪೋಣಿಸಿ ಮೋದಿಜಿಯವರ 9 ಅಡಿ ಎತ್ತರದ ಬೃಹತ್ ಭಾವಚಿತ್ರವನ್ನು ಶ್ರೀನಾಥ್ ಮಣಿಪಾಲ ರಚಿಸಿದ್ದಾರೆ.
ಈ ಕಲಾಕೃತಿಯ ರಚನೆಯಲ್ಲಿ ಮತ್ತೊಬ್ಬ ಕಲಾವಿದ ರವಿ ಹಿರೇಬೆಟ್ಟು ಶ್ರೀನಾಥ್‌ಗೆ ಸಹಯೋಗವನ್ನು ನೀಡಿದ್ದಾರೆ. ನಾಳೆ ನ.28ರಂದು ಮೋದಿ ಅವರು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡುವ ವೇಳೆಗೆ ಈ ಕಲಾಕೃತಿ ಶ್ರೀಕೃಷ್ಣ ಮಠದ ಆವರಣದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಕಲಾವಿದ ಶ್ರೀನಾಥ್ ಮಣಿಪಾಲ ತಿಳಿಸಿದ್ದಾರೆ.
Next Story





