ಮಣಿಪಾಲ | ಪರ್ಯಾಯ ಮಹೋತ್ಸವಕ್ಕೆ ಹೋಗಿಬಂದ ವ್ಯಕ್ತಿ ಮಲಗಿದ್ದಲ್ಲಿಯೇ ಮೃತ್ಯು

ಉಡುಪಿ, ಜ.19: ಪರ್ಯಾಯ ಮಹೋತ್ಸವಕ್ಕೆ ಹೋಗಿ ಬಂದು ಮನೆಯಲ್ಲಿ ಮಲಗಿದ್ದ ವ್ಯಕ್ತಿಯೊಬ್ಬರು ಅಲ್ಲೇ ಮೃತಪಟ್ಟ ಘಟನೆ ಜ.18ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಕರಂಬಳ್ಳಿ ಸಂತೋಷ ನಗರದ ಶಶಿಧರ(47) ಎಂದು ಗುರುತಿಸಲಾಗಿದೆ. ಹೈಪರ್ ಟೆನ್ಶನ್ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಇವರು, ಜ.17ರಂದು ರಾತ್ರಿ ಪರ್ಯಾಯ ಉತ್ಸವಕ್ಕೆ ಹೋಗಿ, ಜ.18ರಂದು ಬೆಳಗ್ಗೆ 5:45 ಗಂಟೆಗೆ ಮನೆಗೆ ಬಂದು ಮಲಗಿದ್ದರು.
ಗಾಢ ನಿದ್ರೆಯಲ್ಲಿದ್ದ ಶಶಿಧರ್ ಅವರನ್ನು ಎಬ್ಬಿಸಿದಾಗ ಏದ್ದೇಳಲೇ ಇಲ್ಲ. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಅಲ್ಲಿ ವೈದ್ಯರು ಪರೀಕ್ಷಿಸಿ, ಶಶಿಧರ್ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ, ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





