ಮಣಿಪಾಲ | ರಾಷ್ಟ್ರೀಯ ಕ್ರೀಡಾಡಳಿತ ಕಾರ್ಯಗಾರ

ಮಣಿಪಾಲ, ಡಿ.6: ಯಕ್ಷಿತ್ ಯುವ ಫೌಂಡೇಶನ್ ವತಿಯಿಂದ ‘ಸ್ಪೋರ್ಟ್ ಲೀಡರ್ಶಿಪ್ 101’ ಕಾರ್ಯಕ್ರಮವನ್ನು ಮಣಿಪಾಲದಲ್ಲಿ ಆಯೋಜಿಸಲಾಗಿತ್ತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಯಕ್ಷಿತ್ ಯುವ ಫೌಂಡೇಶನ್ ಸಂಸ್ಥಾಪಕ ಶ್ರೀಪಾದ ರವಿ ರಾವ್ ಮಾತನಾಡಿ, ಯುವಜನತೆಯೇ ಭಾರತದ ಕ್ರೀಡಾ ಭವಿಷ್ಯದ ಚಾಲಕಶಕ್ತಿ. ಪಾರದರ್ಶಕತೆ, ನೈತಿಕತೆ ಮತ್ತು ಉದ್ದೇಶಪೂರ್ಣ ನಾಯಕತ್ವದ ಮೂಲಕ ಮಾತ್ರ ದೇಶದ ಕ್ರೀಡಾ ವ್ಯವಸ್ಥೆ ಮುಂದಿನ ಹಂತಕ್ಕೆ ಸಾಗಬಹುದು ಎಂದು ಹೇಳಿದರು.
ರೋಟರಿ ಕ್ಲಬ್ ಆಫ್ ಸಾಯಿಬರಕಟ್ಟೆ ಅಧ್ಯಕ್ಷ ಥಾಮಸ್, ಪತ್ರಕರ್ತ ಸಂತೋಷ್ ನಾಯ್ಕ್, ಫಾಲ್ಕನ್ ಫಿಟ್ನೆಸ್ ಸಂಸ್ಥಾಪಕ ಸುರಜ್ ಶೆಟ್ಟಿ ಉಪಸ್ಥಿತರಿದ್ದರು. ಭಾಗವಹಿಸಿದವರಿಗೆ ಫೌಂಡೇಶನ್ ಟ್ರಸ್ಟಿ ಸ್ವಪ್ನಿಲ್ ಪಾಟೀಲ್ ಪ್ರಮಾಣಪತ್ರಗಳನ್ನು ವಿತರಿಸಿದರು. ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ವೈಭವ್ ಆರ್.ಪಾಟೀಲ್ ವಂದಿಸಿದರು.
Next Story





