ಮರವಂತೆ ಬೀಚ್: ಅಲೆಗಳ ಅಬ್ಬರಕ್ಕೆ ಸಿಲುಕಿ ಯುವಕ ಸಮುದ್ರಪಾಲು

ಗಂಗೊಳ್ಳಿ, ಜು.18: ತ್ರಾಸಿ-ಮರವಂತೆ ಬೀಚ್‌ನಲ್ಲಿ ಯುವಕನೋರ್ವ ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರಪಾಲಾಗಿರುವ ಘಟನೆ ಮಂಗಳವಾರ ಮಧ್ಯಾಹ್ನ ವರದಿಯಾಗಿದೆ.
ನೀರುಪಾಲಾದವರನ್ನು ಮೂಲತಃ ಗದಗದ ಪ್ರಸ್ತುತ ಕಾಪುವಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿರುವ ಫಿರ್‌ಸಾಬ್ ನಾದಾಫ್(22) ಎಂದು ಗುರುತಿಸಲಾಗಿದೆ.
ಕಾಪುವಿನಿಂದ ಹೊರಟ ಟ್ಯಾಂಕರಿನಲ್ಲಿ ನದಾಫ್ ಹಾಗೂ ಇತರ ಇಬ್ಬರು ಆಗಮಿಸಿದ್ದು ತ್ರಾಸಿ ಬಳಿ ಸಮುದ್ರ ತೀರಕ್ಕೆ ಬಂದಿದ್ದರು. ಈ ವೇಳೆ ನದಾಫ್ ಫೋನ್ ಕರೆಯಲ್ಲಿದ್ದು ದೈತ್ಯ ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದಾರೆ ಎಂದು ತಿಳಿದುಬಂದಿದೆ.
ಫಿರ್‌ಸಾಬ್ ನಾದಾಪ್ ಅವರಿಗೆ ಮಧ್ಯಾಹ್ನದಿಂದಲೂ ಶೋಧ ಕಾರ್ಯ ಮುಂದುವರೆದಿದೆ. ಕಾರ್ಯಾಚರಣೆಯಲ್ಲಿ ಗಂಗೊಳ್ಳಿ ಪೊಲೀಸರು, ಅಗ್ನಿಶಾಮಕ ದಳ, ಗಂಗೊಳ್ಳಿ ಆಪತ್ಬಾಂಧವ ಅಂಬುಲೆನ್ಸ್ ಕಾರ್ಯಕರ್ತರು ತೊಡಗಿಸಿ ಕೊಂಡಿದ್ದಾರೆ.
Next Story