ಕೊಪ್ಪಲಂಗಡಿ ಮದ್ರಸ ಅಧ್ಯಕ್ಷರಾಗಿ ಎಂ.ಎಚ್.ಹಸನ್ ಆಯ್ಕೆ

ಕಾಪು: ಕೊಪ್ಪಲಂಗಡಿ ನೂರುಲ್ ಹುದಾ ಅರಬಿಕ್ ಮದ್ರಸದ ಆಡಳಿತ ಸಮಿತಿಯ 2023-24ನೇ ಸಾಲಿನ ಮಹಾಸಭೆಯು ಇತ್ತೀಚೆಗೆ ಜರಗಿತು.
ಮುಖ್ಯ ಗುರುಗಳಾದ ಅಬ್ದುಲ್ ಬ್ಯಾರಿ ಉಸ್ತಾದ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗೌರವಧ್ಯಕ್ಷರಾಗಿ ಮಯ್ಯದ್ದಿ ಕೆ.ಎಚ್., ಅಧ್ಯಕ್ಷರಾಗಿ ಎಂ.ಎಚ್. ಹಸನ್, ಉಪಾಧ್ಯಕ್ಷರಾಗಿ ಯೂಸುಫ್ ಹೈದರ್, ಪ್ರಧಾನ ಕಾರ್ಯದರ್ಶಿ ಯಾಗಿ ಯೂಸುಫ್ ಅಹ್ಮದ್, ಜೊತೆ ಕಾರ್ಯದರ್ಶಿಯಾಗಿ ನಿಶಾಮ್ ಮನ್ಹರ್, ಕೋಶಾಧಿಕಾರಿಯಾಗಿ ಮುಸ್ತಫ ಮಧುರ, ಲೆಕ್ಕ ಪರಿಶೋಧಕ ರಾಗಿ ಬಶೀರ್ ಮಾಸ್ಟರ್, ಸದಸ್ಯರಾಗಿ ಅಲಿಯಾಬ್ಬ, ಮೊಯಿದಿನ್ ಕೆ.ಪಿ., ಅಬೂಬಕ್ಕರ್ ಕೆ.ಎಚ್., ಇಬ್ರಾಹಿಂ ಮಧುರ, ಸಂಶುದ್ದಿನ್ ಪಡು, ಉಸ್ಮಾನ್ ಕೆ.ಎಚ್., ಹಸನಬ್ಬ ಮಧುರ, ಶರೀಫ್ ಕೆ.ಎಚ್. ಅವರನ್ನು ಆಯ್ಕೆ ಮಾಡಲಾಯಿತು.
Next Story





