ಹಾಲಿನ ಬೆಲೆ ಏರಿಕೆ: ಉಡುಪಿ ಜಿಲ್ಲಾ ಕೃಷಿಕ ಸಂಘ ಸ್ವಾಗತ

ಸಾಂದರ್ಭಿಕ ಚಿತ್ರ
ಉಡುಪಿ, ನ.1: ರಾಜ್ಯ ಸರಕಾರವು ನ.1ರಿಂದ ಹಾಲಿನ ಬೆಲೆಯನ್ನು ಲೀಟರ್ ಒಂದಕ್ಕೆ 8ರೂ.ಗೆ ಹೆಚ್ಚಿಸಿ ಹೈನುಗಾರರ ಹಿತ ಕಾಯಲು ಮುಂದಾಗಿ ರುವುದಕ್ಕೆ ಉಡುಪಿ ಜಿಲ್ಲಾ ಕೃಕ ಸಂಘವು ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದೆ.
ಪ್ರತಿಯೊಂದು ವಸ್ತುಗಳ ಬೆಲೆಯನ್ನು ಅದರ ಉತ್ಪಾದಕರು, ತಯಾರಕರೇ ನಿರ್ಧರಿಸುತ್ತಾರೆ ಮತ್ತು ಏರಿದ ಬೆಲೆ ಎಂದೂ ಕಡಿಮೆಯಾಗುವುದಿಲ್ಲ. ಆದರೆ ಹೈನುಗಾರಿಕೆ ಮತ್ತು ಕೃಷಿ ಉತ್ಪನ್ನ-ಬೆಳೆಗಳ ಬೆಲೆಯನ್ನು ಮಾತ್ರ ಎಂದೂ ಕೃಷಿಕರು ನಿರ್ಧರಿಸುವ ಪರಿಸ್ಥಿತಿ ನಮ್ಮಲ್ಲಿ ಇಲ್ಲ. ಮಾರುಕಟ್ಟೆಯಲ್ಲಿ ಇರುವ ಬೆಲೆ ಕೂಡಾ ಸ್ಥಿರ ಇಲ್ಲದೆ ಕೃಷಿಕರು ನಷ್ಟ ಹೊಂದುವುದೇ ಹೆಚ್ಚು. ಬಹಳಷ್ಟು ಬಾರಿ ಹೈನುಗಾರಿಕೆ ಹಾಗೂ ಕೃಷಿಗಾಗಿ ಮಾಡುವ ಖರ್ಚು ಕೂಡಾ ಮಾರುಕಟ್ಟೆಯಲ್ಲಿ ಹುಟ್ಟದೆ ನಷ್ಟದಲ್ಲೇ ಮಾರಾಟ ಮಾಡುವ ಸ್ಥಿತಿ ಇದೆ ಎಂದು ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ತಿಳಿಸಿದ್ದಾರೆ.
ಹೈನುಗಾರಿಕೆ ನಡೆಸುವವರಿಗೆ ದನ ಕರುಗಳ ಸಾಕಾಣಿಕೆಯಲ್ಲಿ ತಗಲುವ ನಿರ್ವಹಣಾ ವೆಚ್ಚ, ಪಶುಗಳ ರೋಗ, ಗರ್ಭಧಾರಣಾ ಸಮಸ್ಯೆಗಳ ವೈದ್ಯಕೀಯ ಖರ್ಚು, ಮೇವು ದರ ಏರಿಕೆ, ದನ ಕಳ್ಳತನದ ಸಂಕಷ್ಟಗಳ ಹಿನ್ನೆಲೆಯಲ್ಲಿ ಹೈನುಗಾರಿಕೆಯನ್ನು ತೊರೆಯುವವರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಈಗಾಗಲೇ ಬೇಡಿಕೆಯ ಪ್ರಮಾಣದಲ್ಲಿ ಹಾಲು ಪೂರೈಕೆ ಇರದೆ ರಾಜ್ಯದಲ್ಲಿ ರಾಸಾಯನಿಕ ಬಳಸಿ ನಕಲಿ ಹಾಲು ತಯಾರಕರು ಹುಟ್ಟಿಕೊಂಡು ನಗರವಲ್ಲದೆ ಹಳ್ಳಿಗಳಲ್ಲೂ ಜನರ ಆರೋಗ್ಯ ದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಪ್ರಸ್ತುತ ಹಾಲಿನ ಬೆಲೆ ಏರಿಕೆಯಿಂದ ಹೈನುಗಾರಿಕೆ ನಡೆಸುವವರು ಅಲ್ಪ ಮಟ್ಟಿಗೆ ಚೇತರಿಸಿಕೊಳ್ಳಲು ಸಹಾಯವಾಗಬಲ್ಲದು. ಜನತೆಗೆ ಶುದ್ಧ ಹಾಲು ದೊರೆಯಬಲ್ಲದು ಮತ್ತು ಕೃಷಿ, ಹೈನುಗಾರಿಕೆುಂದ ಮುಖರಾಗಲು ಹೊರಟಿರುವವರಲ್ಲಿ ಆಶಾ ಭಾವನೆ ಹುಟ್ಟಿಸಿದೆ ಎಂದು ರಾಮಕೃಷ್ಣ ಶರ್ಮ ಬಂಟಕಲ್ಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






