ಮೂಳೂರು: ಅಲ್ ಇಹ್ಸಾನ್ ಪ್ರೌಢಶಾಲೆ ಗೆ ಶೇ.100 ಫಲಿತಾಂಶ
ಕಾಪು, ಮೇ 9: ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಡಿಕೆಎಸ್ಸಿ ಅಧೀನ ಸಂಸ್ಥೆ ಮೂಳೂರಿನ ಅಲ್ ಇಹ್ಸಾನ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಶೇ.100 ಫಲಿತಾಂಶ ದಾಖಲಿಸುವ ಮೂಲಕ ವಿಶಿಷ್ಟ ಸಾಧನೆ ಮಾಡಿದೆ.
ಶಾಲೆಯ 60 ಬಾಲಕರು ಹಾಗೂ 57 ಬಾಲಕಿಯರು ಸೇರಿದಂತೆ ಒಟ್ಟು 117 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 15 ಮಂದಿ ಉನ್ನತ ದರ್ಜೆ, 84 ಮಂದಿ ಪ್ರಥಮ ದರ್ಜೆ ಹಾಗೂ 18 ಮಂದಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರ ಪೈಕಿ ಅಫ್ಶೀನ್ ಆಯಿಷಾ 625ರಲ್ಲಿ 606 ಅಂಕ ಗಳಿಸುವ ಮೂಲಕ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story