ಮೂಳೂರು: ಲಾರಿ ಢಿಕ್ಕಿ; ಪಾದಚಾರಿ ಮೃತ್ಯು

ಕಾಪು: ರಸ್ತೆ ದಾಟಲು ನಿಂತಿದ್ದ ವ್ಯಕ್ತಿಯೊಬ್ಬರಿಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ಮೂಳೂರು ರಾಹೆ 66ರಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.
ಮೂಳೂರು ಫಿಶರೀಸ್ ರಸ್ತೆ ಬಳಿಯ ನಿವಾಸಿ ಧನಂಜಯ ಎ. ಸುವರ್ಣ (43) ಮೃತ ವ್ಯಕ್ತಿ. ಮೂಳೂರು ಬಾರ್ ನ ಮುಂಭಾಗದಲ್ಲಿ ರಸ್ತೆ ದಾಟಲೆಂದು ಡಿವೈಡರ್ ಮೇಲೆ ನಿಂತಿದ್ದ ಧನಂಜಯ ಅವರಿಗೆ ಮಂಗಳೂರಿನಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಲಾರಿ ಢಿಕ್ಕಿ ಹೊಡೆದಿದೆ. ಲಾರಿಯ ಹೊಡೆತದ ರಭಸಕ್ಕೆ ರಸ್ತೆಗೆ ಬಿದ್ದ ಅವರ ಮೇಲೆ ಲಾರಿಯ ಚಕ್ರ ಹರಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎMದು ತಿಳಿದು ಬಂದಿದೆ.
ಅಪಘಾತದ ಬಳಿಕ ಚಾಲಕ ಲಾರಿಯನ್ನು ನಿಲ್ಲಿಸದೇ ಪರಾರಿಯಾಗಿದ್ದು, ಲಾರಿಯ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಕಾಪು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಪ್ರಕರಣ ದಾಖಲಿಸಿ ಕೊಂಡು ತನಿಖೆ ಮುಂದುವರಿಸಿದ್ದಾರೆ.
ಸ್ಥಳೀಯ ಎಸ್‌ಡಿಪಿಐ ಪಕ್ಷದ ಆ್ಯಂಬುಲೆನ್ಸ್ ಮೂಲಕ ಜಲಾಲುದ್ದೀನ್, ನವಾಝ್, ಮಹ್ರೂಫ್, ವಿಕ್ಕಿ ರಿಕ್ಷಾ, ಅಚ್ಚು ಆತ್ರಾಡಿ ಹಾಗೂ ಇಮ್ತಿಯಾಝ್ ಮೂಳೂರು ಸೇರಿ ಮೃತ ಶರೀರವನ್ನು ಆಸ್ಪತ್ರೆಗೆ ಸಾಗಿಸಿದರು.





