ಮೂಳೂರು: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

ಕಾಪು, ಫೆ.4: ಮುಸ್ಲಿಂ ಎಜುಕೇಶನಲ್ ಇನ್ಸಿಟ್ಯೂಶನ್(ಮೀಫ್) ಉಡುಪಿ ಘಟಕ, ಅಲ್-ಇಹ್ಸಾನ್ ಗ್ರೂಪ್ ಆಫ್ ಎಜುಕೇಶನಲ್ ಇನ್ಸಿಟ್ಯೂಷನ್ ಡಿಕೆಎಸ್‌ಸಿ ಮೂಳೂರು ಮತ್ತು ಜಂಇಯ್ಯತುಲ್ ಫಲಾಹ್ ಕಾಪು ಶಾಖೆಯ ಸಹಯೋಗದೊಂದಿಗೆ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ವನ್ನು ಬುಧವಾರ ಆಯೋಜಿಸಲಾಗಿತ್ತು.
ಕಾರ್ಯಾಗಾರವನ್ನು ಅಲ್-ಇಹ್ಸಾನ್‌ನ ಪ್ರಧಾನ ವ್ಯವಸ್ಥಾಪಕ ಮೌಲಾನಾ ಯು.ಕೆ.ಮುಸ್ತಫಾ ಸಅದಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮೀಫ್ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಮೊಹಮ್ಮದ್ ಅಕ್ರಮ್ ಮೌಲಾ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮೀಫ್ ಉಡುಪಿ ಜಿಲ್ಲಾ ಗೌರವಾಧ್ಯಕ್ಷ ಶಬೀ ಅಹ್ಮದ್ ಖಾಝಿ, ಜಂ ಇಯ್ಯತುಲ್ ಫಲಾಹ್ ಕಾಪು ಶಾಖೆಯ ಅಧ್ಯಕ್ಷ ಮೊಹಮ್ಮದ್ ಇಕ್ಬಾಲ್, ಅಲ್-ಇಹ್ಸಾನ್ ಮುಖ್ಯ ಸಲಹೆಗಾರ ಅನ್ವರ್ ಹುಸೇನ್ ಗೂಡಿನಬಳಿ, ಮೀಫ್ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಸ್ಲಂ ಹೈಕಾಡಿ, ಅಲ್-ಇಹ್ಸಾನ್ ಕ್ಯಾಂಪಸ್ಸಿನ ಮುಖ್ಯಾಧಿಕಾರಿ ಪ್ರೊ.ಯೂಸುಫ್ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ರಾಷ್ಟ್ರ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕೊಯ್ಯಾರು ಶಾಲೆಯ ಮುಖ್ಯೋಪಾಧ್ಯಾಯ, ಗಣಿತ ಶಿಕ್ಷಕ ಯಾಕುಬ್ ಎಸ್. ಕಾರ್ಯಾಗಾರ ನಡೆಸಿಕೊಟ್ಟರು. ಶಾಲಾ ಪ್ರಾಂಶುಪಾಲ ಹಬೀಬ್ ರಹಮಾನ್ ಸ್ವಾಗತಿಸಿ ದರು. ಪ್ರೌಢಶಾಲಾ ಮೇಲ್ವಿಚಾರಕ ಖಲಂದರ್ ಶಫಿ ಕಾರ್ಯಕ್ರಮ ನಿರ್ವಹಿಸಿದರು. ಉಡುಪಿ ಮತ್ತು ಕಾಪು ತಾಲೂಕಿನ 5 ಪ್ರೌಢ ಶಾಲೆಗಳ ಒಟ್ಟು 300 ವಿದ್ಯಾರ್ಥಿಗಳು ಭಾಗವಹಿಸಿದ್ದರು.






