Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಕುಂದಾಪುರ| ಅತ್ತಿಕೋಣೆಯಲ್ಲಿ ಕುಡಿಯುವ...

ಕುಂದಾಪುರ| ಅತ್ತಿಕೋಣೆಯಲ್ಲಿ ಕುಡಿಯುವ ನೀರಿಗೆ ತತ್ವಾರ; ಒಂದು ಕೊಡಪಾನ ನೀರು ತರಲು ದೋಣಿ ಅವಲಂಬನೆ

ಯೋಗೀಶ್ ಕುಂಭಾಶಿಯೋಗೀಶ್ ಕುಂಭಾಶಿ19 April 2026 8:00 PM IST
share
ಕುಂದಾಪುರ| ಅತ್ತಿಕೋಣೆಯಲ್ಲಿ ಕುಡಿಯುವ ನೀರಿಗೆ ತತ್ವಾರ; ಒಂದು ಕೊಡಪಾನ ನೀರು ತರಲು ದೋಣಿ ಅವಲಂಬನೆ
► 75 ಕುಟುಂಬಗಳಿಗೆ ಬೇಸಿಗೆಯಲ್ಲಿ 'ಜೀವಜಲ' ಸಮಸ್ಯೆ

ಕುಂದಾಪುರ, ಎ.19: ಸೌಪರ್ಣಿಕಾ ನದಿಯ ತಟದಲ್ಲಿಯೇ ಇರುವ ಈ ಊರಿನಲ್ಲಿ ಕುಡಿಯುವ ನೀರಿಗೆ ತತ್ವಾರವಿದೆ. ಹಳೆಯ ಟ್ಯಾಂಕ್ ಸಮೀಪವೇ ಸುಮಾರು 22 ಲಕ್ಷ ರೂ. ಖರ್ಚು ಮಾಡಿ, ಹೊಸ ನೀರಿನ ಟ್ಯಾಂಕ್ ನಿರ್ಮಿಸಿದ್ದರೂ, ಇಲ್ಲಿನ ಜನರ ನೀರಿನ ಸಮಸ್ಯೆಗೆ ಮಾತ್ರ ಇನ್ನೂ ಮುಕ್ತಿ ದೊರಕಿಲ್ಲ. ಹಲವು ವರ್ಷಗಳಿಂದ ಕುಡಿಯುವ ನೀರಿಗಾಗಿ ಜನರು ಅನುಭವಿಸುತ್ತಿರುವ ಸಮಸ್ಯೆ ಅಷ್ಟಿಷ್ಟಲ್ಲ. ಕುಡಿಯುವ ನೀರು ಸೇರಿದಂತೆ ದಿನಬಳಕೆಗಾಗಿ ನೀರನ್ನು ದೋಣಿ ಮೂಲಕ ಹೊಳೆ ದಾಟಿ ತರಬೇಕಾದ ಸ್ಥಿತಿ ಇಲ್ಲಿಯ ಜನರದ್ದಾಗಿದೆ. ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಡವು ಗ್ರಾಮದ ಅತ್ತಿಕೋಣೆ ಪರಿಸರದ ನಿವಾಸಿಗಳು ಎದುರಿಸುತ್ತಿರುವ ದಿನನಿತ್ಯದ ಬವಣೆಯಿದು.

ಅತ್ತಿಕೋಣೆ ಗ್ರಾಮದ ಪರಿಸರಕ್ಕೆ ಸುಮಾರು 20 ವರ್ಷಗಳ ಹಿಂದೆ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ನೀರು ಪೂರೈಕೆಗೆ 50 ಸಾವಿರ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಟ್ಯಾಂಕ್ ನಿರ್ಮಿಸಲಾಗಿತ್ತು. ಆದರೂ ಪ್ರತಿ ಮಾರ್ಚ್, ಎಪ್ರಿಲ್, ಮೇ ತಿಂಗಳಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿತ್ತು. ಅದಕ್ಕಾಗಿ ಈ ವರ್ಷ ಪಂಚಾಯತ್‌ನಿಂದ 22.44 ಲಕ್ಷ ರೂ. ಖರ್ಚು ಮಾಡಿ, ಪಡುಕೋಣೆಯ ಸರಕಾರಿ ಶಾಲೆ ಬಳಿ ಒಂದು ಲಕ್ಷ ಲೀಟರ್ ಸಾಮರ್ಥ್ಯದ ಹೊಸ ಟ್ಯಾಂಕ್ ನಿರ್ಮಿಸಲಾಗಿತ್ತು.

ಇತ್ತೀಚೆಗೆ ಉದ್ಘಾಟನೆಯಾದರೂ ಕೂಡ ಸಮೀಪದ ಮನೆಗಳಿಗೆ ಸಹ ಇದರಿಂದ ನೀರು ಪೂರೈಕೆಯಾಗುತ್ತಿಲ್ಲ. ಲಕ್ಷಾಂತರ ರೂ. ಖರ್ಚು ಮಾಡಿದರೂ ಅತ್ತಿಕೋಣೆ ಪರಿಸರಕ್ಕೆ ಕನಿಷ್ಠ 2 ದಿನಕ್ಕೊಮ್ಮೆ ನೀರು ಕೊಡಲು ಕೂಡ ಸಾಧ್ಯವಾಗುತ್ತಿಲ್ಲ ಎಂದು ಗ್ರಾಮಸ್ಥರು ನಾಡ ಗ್ರಾಪಂ ವಿರುದ್ಧ ಆಕ್ರೋಶ ವ್ಯಕ್ತಪಡಿಸುತಿದ್ದಾರೆ.

ಅತ್ತಿಕೋಣೆ ಪರಿಸರದಲ್ಲಿ ಟ್ಯಾಂಕ್ ನಿರ್ಮಿಸುವ ಮೊದಲು ಗ್ರಾಮಸ್ಥರು ಸೌಪರ್ಣಿಕಾ ನದಿಯನ್ನು ದೋಣಿ ಮೂಲಕ ದಾಟಿ ತ್ರಾಸಿಯ ಖಾಸಗಿ ವ್ಯಕ್ತಿಯೊಬ್ಬರ ಬಾವಿಯಿಂದ ನೀರು ತರುತ್ತಿದ್ದರು. ಈಗ ಮತ್ತೆ 15 ದಿನದಿಂದ ಜನರ ಪರಿಸ್ಥಿತಿಯೂ ಅದೇ ಆಗಿದೆ. ಅತ್ತಿಕೋಣೆಯಿಂದ ದೋಣಿ ಮೂಲಕ ಹೊಳೆ ದಾಟಿ ತ್ರಾಸಿಗೆ ತೆರಳಿ ಅಲ್ಲಿಂದ ಕೊಡಪಾನ, ಬಕೆಟ್‌ಗಳಲ್ಲಿ ನೀರು ತುಂಬಿಸಿಕೊಂಡು, ಮತ್ತೆ ದೋಣಿಯಲ್ಲಿ ಹೊಳೆ ದಾಟಿ ಬರಬೇಕಾದ ಅನಿವಾರ್ಯತೆಯಿದೆ.

‘ಕುಡಿಯಲು ಒಂದು ಕೊಡಪಾನ ನೀರು ಬೇಕಾದರೂ ನದಿ ದಾಟಬೇಕಿದೆ. ಇಲ್ಲಿ ದಿನಕ್ಕೆ ಒಂದು ಕೊಡಪಾನ ನೀರು ಸಹ ಸಿಗುತ್ತಿಲ್ಲ. ಮೊಮ್ಮಗ ನೀರು ತಂದರೆ ಕುಡಿಯುವ ನೀರು ಸಿಗುತ್ತದೆ. ದೂರ ಹೋಗಿ ತರಲು ದೇಹದಲ್ಲಿ ಶಕ್ತಿಯಿಲ್ಲ ಎನ್ನುತ್ತಾರೆ ಹಿರಿಯ ಮಹಿಳೆ ಅಂತಿ ದೇವಾಡ್ತಿ

ನೀರಿಗೆ ಪರದಾಟ-ಚುನಾವಣಾ ಬಹಿಷ್ಕಾರದ ಎಚ್ಚರಿಕೆ!

ಅತ್ತಿಕೋಣೆ ಪ್ರದೇಶ ಸೌಪರ್ಣಿಕ ನದಿಯ ದಡದಲ್ಲಿದೆ. 70ಕ್ಕೂ ಅಧಿಕ ಮನೆಗಳಲ್ಲಿ ಇನ್ನೂರಕ್ಕೂ ಅಧಿಕ ಜನರಿದ್ದಾರೆ. ಶಾಲೆ-ಕಾಲೇಜಿಗೆ ತೆರಳುವ ಮಕ್ಕಳು, ಹಿರಿಯ ನಾಗರಿಕರು ಇಲ್ಲಿದ್ದಾರೆ. ಇಲ್ಲಿನ ಹೆಚ್ಚಿನ ಮನೆಗಳಲ್ಲಿ ಬಾವಿಯಿಲ್ಲ. ಇರುವ ಬಾವಿಗಳ ನೀರು ಉಪ್ಪಾಗಿದೆ. ಅದು ಒಗರಾಗಿದ್ದು ಕುಡಿಯಲು, ಅಡುಗೆ, ಸ್ನಾನಕ್ಕೂ ಬಳಸಲು ಸಾಧ್ಯವಿಲ್ಲ ವಾಗಿದೆ. ಒಂದೆಡೆ ಬಾವಿಯೂ ಇಲ್ಲ, ಇನ್ನೊಂದೆಡೆ ನಳ್ಳಿ ನೀರು ಇಲ್ಲದೇ ಇಲ್ಲಿನ ಜನರು ನೀರಿಗಾಗಿ ಪರದಾಟ ನಡೆಸುವಂತಾಗಿದೆ.

ಚುನಾವಣೆ ಸಂದರ್ಭ ಮತ ಕೇಳಲು ಬರುವ ವಿವಿಧ ಪಕ್ಷದವರು ತಾವು ಗೆದ್ದ ಬಳಿಕ ಇತ್ತ ಕಡೆ ಸುಳಿಯಲ್ಲ. ನಮ್ಮ ಕಷ್ಟದ ಬಗ್ಗೆ ಸ್ಪಂದಿಸುವುದಿಲ್ಲ. ಬಹುಕಾಲದ ನಮ್ಮ ಕುಡಿಯುವ ನೀರಿನ ಸಮಸ್ಯೆ ಸಹಿತ ಮೂಲ ಸೌಕರ್ಯ ಗಳನ್ನು ಪೂರೈಸದೇ ಇದ್ದಲ್ಲಿ ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸು ವುದಾಗಿ ಇಲ್ಲಿನ ನಿವಾಸಿಗಳ ಪರವಾಗಿ ಸ್ಥಳೀಯ ನಿವಾಸಿ ಮಂಜುನಾಥ ದೇವಾಡಿಗ ತಿಳಿಸಿದ್ದಾರೆ.

‘ಹಳೆ ಟ್ಯಾಂಕ್ ಇದ್ದಾಗಲೂ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಇತ್ತು. ಈಗ ಅದಕ್ಕಿಂತ ದೊಡ್ಡದಾದ ಹೊಸ ಟ್ಯಾಂಕ್ ನಿರ್ಮಾಣವಾದರೂ ನೀರಿನ ಸಮಸ್ಯೆ ನೀಗಿಲ್ಲ. ಕಳೆದ ಹಲವು ದಶಕಗಳಿಂದಲೂ ನಮ್ಮೂರಿನ ಜನ ಇದೇ ಸಮಸ್ಯೆ ಅನುಭವಿಸುತ್ತಿದ್ದಾರೆ. ಟ್ಯಾಂಕ್ ನಿರ್ಮಾಣಕ್ಕಾಗಿ ಲಕ್ಷಾಂತರ ರೂಪಾಯಿ ವ್ಯಯಿಸಿದರೂ ನಳ್ಳಿಯಲ್ಲಿ ಒಂದು ಹನಿ ನೀರು ಬಂದಿಲ್ಲ. ಜನರ ಸಂಕಷ್ಟವನ್ನು ಆಳುವ ಜನಪ್ರತಿನಿಧಿಗಳು ಅರಿಯಬೇಕು. ತುರ್ತಾಗಿ ಟ್ಯಾಂಕರ್ ಮೂಲಕ ವಾದರೂ ನೀರು ಸರಬರಾಜು ಮಾಡಲು ಕ್ರಮವಹಿಸಬೇಕು.

-ಟೋನ್ ಡಿಸೋಜಾ ಅತ್ತಿಕೋಣೆ, ಸ್ಥಳೀಯ ನಿವಾಸಿ.

‘ನೀರು ತರಲು ದೋಣಿ ಬೇಕು. ದೋಣಿಯಲ್ಲಿ ಹೊಳೆದಾಟಿ ನಿತ್ಯ ಬಳಕೆಗೆ ಬೇಕಾದಷ್ಟು ನೀರು ತರುವುದು ಅಸಾಧ್ಯ. ವರ್ಷಂಪ್ರತಿ ನೀರಿನ ಸಮಸ್ಯೆ ಕಾಡುತ್ತಿದ್ದರೂ ಸ್ಥಳೀಯಾಡಳಿತದ ಸ್ಪಂದನೆಯಿಲ್ಲ. ಬಾವಿ ತೋಡಿದರೂ, ಕೊಳವೆ ಬಾವಿಯಲ್ಲೂ ಉಪ್ಪು ನೀರು ಬರುತ್ತದೆ. ಉಪ್ಪು ನೀರು ಕುಡಿಯುವುದು ಅನಿವಾರ್ಯವಾಗಿದೆ. ಅನಾರೋಗ್ಯ ಪೀಡಿತರ ಸಮಸ್ಯೆ ಹೇಳತೀರದಾಗಿದೆ. ಜನಪ್ರತಿನಿಧಿಗಳು ಕಷ್ಟ ಕೇಳಲ್ಲ. ಮನೆಗೆ ಅಳವಡಿಸಿದ ನಳ್ಳಿಯಲ್ಲಿ ನೀರು ಬರಲ್ಲ. ನಿತ್ಯ ಬಳಕೆಗೆ, ಕುಡಿಯಲು ನೀರಿಲ್ಲ. ಬೇಸಿಗೆಯಲ್ಲಿ ಅಗತ್ಯವಾಗಿ ನೀರು ಪೂರೈಕೆಗೆ ಕ್ರಮವಹಿಸಬೇಕು.

-ಪ್ರೇಮಾ, ಕ್ಲಾರಾ ಒಲಿವೇರಾ, ಮರಿಯಾ ಡಿಸೋಜಾ (ಸ್ಥಳೀಯ ನಿವಾಸಿಗಳು)



Tags

DrinkingwatershortageAttikoneDependenceboat
share
ಯೋಗೀಶ್ ಕುಂಭಾಶಿ
ಯೋಗೀಶ್ ಕುಂಭಾಶಿ
Next Story
X