ನಾರಾವಿ: ಸರಕಾರಿ ಪ್ರೌಢ ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್, ಸ್ಮಾರ್ಟ್ ಕ್ಲಾಸ್ ಉದ್ಘಾಟನೆ
ಕಾರ್ಕಳ : ನಾರಾವಿ ಸರಕಾರಿ ಪ್ರೌಢಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ ಮತ್ತು ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಹಾಗೂ 2023-24 ನೇ ಸಾಲಿನ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯಲ್ಲಿ 100% ಫಲಿತಾಂಶ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುಣಾತ್ಮಕ ಅಂಕದ ಸರಾಸರಿಯಲ್ಲಿ ಈ ಶಾಲೆ ಪ್ರಥಮ ಸ್ಥಾನ ಪಡೆದುಕೊಂಡ ಕೀರ್ತಿಗೆ ಪಾತ್ರರಾದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ಮುಖ್ಯೋಪಾಧ್ಯಾಯ ಸುಶೀಲಾ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಕಂಪ್ಯೂಟರ್ ಹಾಗೂ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮಾಡಿಸಿ ಕೊಟ್ಟ ಕಾರ್ಕಳದ ದಾನಿ ವಿಶ್ರಾಂತ ಲೆಕ್ಕ ಪರಿಶೋಧಕ ಕೆ ಕಮಲಾಕ್ಷ ಕಾಮತ್ , ಪ್ರತೀಕ್ ಕಾಮತ್ ಯುಎಸ್ಎ, ಕಾರ್ಕಳ ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘ ಕುಕ್ಕುಂದೂರು ಅಧ್ಯಕ್ಷ, ಸಂತೋಷ್ ರಾವ್ ಗ್ರಾಮ ಪಂಚಾಯತ್ ಸದಸ್ಯ ,ಉದಯ್ ಹೆಗ್ಡೆ ನಾರಾವಿ, ಜನಸೇವಾ ಟ್ರಸ್ಟ್ ನ ಕಾರ್ಯದರ್ಶಿ ಉಮೇಶ್ , ಶಾಲಾ ಎಸ್ ಡಿ ಎಂ ಸಿ ಉಪಾದ್ಯಕ್ಷ ಸುರೇಶ್ ಪೂಜಾರಿ ಉಪಸ್ಥಿತರಿದ್ದರು.
2023-24 ನೆ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಮೂರು ವಿದ್ಯಾರ್ಥಿಗಳನ್ನು ಜನಸೇವಾ ಟ್ರಸ್ಟ್ ನ ವತಿಯಿಂದ ಹಾಗೂ ಕಮಲಾಕ್ಷ ಕಾಮತ್ ಪರವಾಗಿ ಸನ್ಮಾನಿಸಿ ಗೌರವಧನ ನೀಡಲಾಯಿತು.100%ಫಲಿತಾಂಶಕ್ಕೆ ಕಾರಣೀಕರ್ತರಾದ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಠಿಣ ಪರಿಶ್ರಮದಿಂದ ವಿದ್ಯಾದಾನ ಮಾಡಿದ ಶಿಕ್ಷಕರನ್ನೂ ಗೌರವದಿಂದ ಸನ್ಮಾನಿಸಲಾಯಿತು. ಕಮಲಾಕ್ಷ ಕಾಮತ್ ಇವರನ್ನೂ ಶಾಲೆಗೆ ನೀಡಿದ ಕೊಡುಗೆಯ ಸಹಕಾರಕ್ಕೆ ಶಾಲಾ ವತಿಯಿಂದ ಹಾಗೂ ಜನಸೇವಾ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ದೈಹಿಕ ಶಿಕ್ಷಕ ಕೋದಂಡರಾಮ ಸ್ವಾಗತಿಸಿ, ಹಿಂದಿ ಶಿಕ್ಷಕಿ ಶಾಂಭವಿ ವಂದಿಸಿದರು. ಗಣಿತ ಶಿಕ್ಷಕಿ ಆಶಾಲತಾ , ಕನ್ನಡಭಾಷಾ ಶಿಕ್ಷಕಿ ಗೀತಾ ಆನಂದ್ ಭಟ್ ಸಮಾಜ ವಿಜ್ಞಾನ ಶಿಕ್ಷಕ ಗೀತಾ ಪ್ರಶಸ್ತಿ ಪತ್ರ ವಾಚಿಸಿದರು
ವಿಜ್ಞಾನ ಶಿಕ್ಷಕ ಶರೀಫ್ ಕೆ ಸಯ್ಯದ್ ಸ್ಮಾರ್ಟ್ ಕ್ಲಾಸ್ ಬಗ್ಗೆ ಮಾಹಿತಿಯನ್ನು ನೀಡಿದರು. ಇಂಗ್ಲಿಷ್ ಭಾಷಾ ಶಿಕ್ಷಕಿ ಆಶಾಲತಾ ಕಾರ್ಯಕ್ರಮ ನಿರೂಪಿಸಿದರು.