ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ: ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ ಸಾಧನೆ

ಕುಂದಾಪುರ: ಬುಡೋಕಾನ್ ಸ್ಪೋರ್ಟ್ಸ್ ಕರಾಟೆ ಉಡುಪಿ ಇವರ ಸಹಯೋಗದೊಂದಿಗೆ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಹಾನ್‌ನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕೋಡಿ ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಶಾಲೆ ಸಿಬಿಎಸ್‌ಇ ಇದರ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಸಾಧನೆ ಮಾಡಿದ್ದಾರೆ.
ಈ ಸ್ಪರ್ಧೆಯಲ್ಲಿ ಮುಹಮ್ಮದ್ ಶಂಮ್ರಾಜ್ ಸೈಫುಲ್ಲ 1 ಚಿನ್ನ ಮತ್ತು 1 ಬೆಳ್ಳಿ, ಮುಹಮ್ಮದ್ ಅಯಾನ್ 1 ಚಿನ್ನ ಮತ್ತು 1 ಕಂಚು, ಮೊಹಮ್ಮದ್ ಸಿನಾನ್ 2 ಬೆಳ್ಳಿ, ಮೊಹಮ್ಮದ್ ಫಹಾದ್ 1 ಬೆಳ್ಳಿ, ಮೊಹಮದ್ ಅಬ್ದುಲ್ ನಸೀರ್ ಒಂದು ಬೆಳ್ಳಿ, ಮಹಮ್ಮದ್ ಐಮಾನ್ 2 ಕಂಚು, ಅಬ್ದುಲ್ ಮುಕ್ಷಿತ್ 2 ಕಂಚು, ಮೊಹಮ್ಮದ್ ಝಯಿಧ್ 2 ಕಂಚು, ಖಲೀಫ ಮಹಮ್ಮದ್ ಮುಸ್ಸಬ್ 1 ಕಂಚು, ಅಮೀರ್ ಹಂಝ 1 ಕಂಚಿನ ಪದಕ ಗೆದ್ದುಕೊಂಡಿ ದ್ದಾರೆ.
ಈ ಸಾಧನೆ ಮಾಡಿದ ಎಲ್ಲಾ ಆಟಗಾರರನ್ನು ಹಾಗೂ ತರಬೇತುದಾರರನ್ನು ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದದವರು ಅಭಿನಂದಿಸಿದ್ದಾರೆ.
Next Story





