ಕರಾವಳಿಯಲ್ಲಿ ನೈಸರ್ಗಿಕ ಕೃಷಿ ಅಭಿಯಾನ: ಉಡುಪಿ-1875, ದ.ಕ.-3088 ಎಕರೆ ಪ್ರದೇಶದಲ್ಲಿ ಸಾವಯವ ಬೆಳೆ

ಉಡುಪಿ: ದೇಶದಲ್ಲಿ ನೈಸರ್ಗಿಕ ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಜಾರಿಗೊ ಳಿಸಿರುವ ರಾಷ್ಟ್ರೀಯ ನೈಸರ್ಗಿಕ ಕಷಿ ಅಭಿಯಾನ ಯೋಜನೆಯಡಿ ಉಡುಪಿ ಜಿಲ್ಲೆಯಲ್ಲಿ 1875 ಎಕರೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3088 ಎಕರೆ ಪ್ರದೇಶಗಳಲ್ಲಿ ಸಾವಯವ ಕೃಷಿ ಉತ್ಪನ್ನಗಳನ್ನು ಬೆಳೆಯುವ ಗುರಿ ಹೊಂದಲಾಗಿದೆ.
ಉಡುಪಿ ಜಿಲ್ಲೆಯಲ್ಲಿ 15 ಗ್ರಾಮಗಳಲ್ಲಿ 1925 ಮಂದಿ ರೈತರು, ದ.ಕ. ಜಿಲ್ಲೆಯಲ್ಲಿ 47 ಗ್ರಾಮಗಳಲ್ಲಿ 3125 ಮಂದಿ ರೈತರು ಯೋಜನೆ ಫಲಾನುಭವಿಗಳಾಗಿದ್ದಾರೆ. ಇವರು ಮುಂದೆ ಒಟ್ಟು 4963 ಎಕರೆ ಕೃಷಿ ಭೂಮಿಯಲ್ಲಿ ಸಾವಯವ ಕೃಷಿ ಉತ್ಪನ್ನಗಳನ್ನು ಬೆಳೆಯಲಿದ್ದಾರೆ.
15 ಕ್ಲಸ್ಟರ್‌ಗಳ ರಚನೆ: ಉಡುಪಿ ತಾಲೂಕಿನಲ್ಲಿ ಚೇರ್ಕಾಡಿ, ಕೊಕ್ಕರ್ಣೆ, ಹೆಗ್ಗುಂಜೆ, ಶಿರ್ವ, ಉದ್ಯಾವರ, ಬೊಮ್ಮರ ಬೆಟ್ಟು, ಕಾರ್ಕಳ ತಾಲೂಕಿನಲ್ಲಿ ಶಿವಪುರ, ಹಿರ್ಗಾನ, ನಿಟ್ಟೆ, ಕೌಡೂರು, ಕುಂದಾಪುರ ತಾಲೂಕಿನಲ್ಲಿ ಗೋಳಿಹೊಳೆ, ಯಳಜಿತ್, ಆಜಿ, ಕೊಡ್ಲಾಡಿ, ಜಪ್ತಿ, ಹೊಂಬಾಡಿ, ಮಂಡಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ.
ಒಂದು ಅಥವಾ ಎರಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲಾ 125 ಎಕರೆ ಪ್ರದೇಶದಲ್ಲಿ 125 ರೈತರನ್ನೊಳ ಗೊಂಡ 15 ಕ್ಲಸ್ಟರ್‌ಗಳನ್ನು ರೂಪಿಸಲಾಗಿದೆ. ಪ್ರತಿ ರೈತರಿಗೆ ಗರಿಷ್ಠ ಒಂದು ಎಕರೆ ಪ್ರದೇಶಕ್ಕೆ ವಷರ್ಕ್ಕೆ 4000ರೂ. ಪ್ರೋತ್ಸಾಹಧನವನ್ನು ನೀಡಲಾಗುತ್ತದೆ. ನೈಸರ್ಗಿಕ ಕಷಿ ಪ್ರವಾಣೀಕರಣಕ್ಕೆ ಪ್ರತ್ಯೇಕವಾಗಿ ಪ್ರತಿ ಹೆಕ್ಟೇರ್‌ಗೆ 2100 ರೂ. ಸಹಾಯಧನ ಲಭ್ಯವಿದೆ. ಪ್ರತಿ 3 ಕ್ಲಸ್ಟರ್‌ಗಳಿಗೆ 2 ಜೈವಿಕ ಗೊಬ್ಬರ ತಯಾರಿಕಾ ಘಟಕ ಸ್ಥಾಪನೆಗೆ ಅವಕಾಶ ವಿದ್ದು, ಟಕಗಳ ನಿರ್ವಾಣಕ್ಕೆ ಒಂದು ಲಕ್ಷ ರೂ.ವರೆಗೆ ಸಹಾಯಧನ ಪಡೆಯಬಹುದಾಗಿದೆ.
ಕೃಷಿ ಸಖಿಯರ ನೇಮಕ: ಈ ಯೋಜನೆಯಡಿ ಪ್ರತಿ ಕ್ಲಸ್ಟರ್‌ಗಳಲ್ಲಿ ಇಬ್ಬರು ಕಷಿ ಸಖಿಯರನ್ನು ನಿಯೋಜಿಸಲಾಗಿದ್ದು, ಈಗಾಗಲೇ ಜಿಲ್ಲೆಯಲ್ಲಿ ಒಟ್ಟು 30 ಕಷಿ ಸಖಿಯರು ನೇಮಕಗೊಂಡಿದ್ದಾರೆ.
ಈ ಕಷಿ ಸಖಿಯರಿಗೆ ಜೈವಿಕ ಗೊಬ್ಬರಗಳು, ಜೀವಾಮತ, ಬೀಜಾಮತ, ನಜೀವಾಮೃತ ಬಳಕೆ ಮುಂತಾದವುಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಇವರು ಮತ್ತೆ ಹಳ್ಳಿಗಳಿಗೆ ತೆರಳಿ ನೈಸರ್ಗಿಕ ಕಷಿಯಲ್ಲಿ ಆಸಕ್ತಿ ಹೊಂದಿರುವ ರೈತರಿಗೆ ತರಬೇತಿ ನೀಡಲಿದ್ದಾರೆ. ಮಣ್ಣು ವಾದರಿಗಳನ್ನು ಸಂಗ್ರಹಿಸಿ ಮಣ್ಣಿನ ಆರೋಗ್ಯ ಕಾರ್ಡಗಳನ್ನು ವಿತರಿಸಲಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
"ಜೀವವೈವಿಧ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪರಿಸರಕ್ಕೆ ಹಾನಿಕಾರವಾದ ಕೀಟನಾಶಕ ಹಾಗೂ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ವಾಡಿ ಬೀಜಾಮತ, ಜೀವಾಮತ, ನಜೀವಾಮತ, ನೀವಾಸ್ತ್ರ, ದಶಪರ್ಣಿ ಮುಂತಾದ ಕಷಿ ಜೈವಿಕ ಪರಿಕರಗಳ ಬಳಕೆಯಿಂದ ಬಹು ಬೆಳೆ ಪದ್ಧತಿಗಳು, ಸಾಂಪ್ರದಾಯಿಕ ಬೇಸಾಯ ಪದ್ಧತಿಗಳನ್ನು ಅನುಸರಿಸಿ ಮಣ್ಣಿನ ಆರೋಗ್ಯವನ್ನು ಸುಧಾರಿಸುವುದು ರಾಷ್ಟ್ರೀಯ ನೈಸರ್ಗಿಕ ಕಷಿ ಅಭಿಯಾನ ಯೋಜನೆ ಮುಖ್ಯ ಉದ್ದೇಶವಾಗಿದೆ. ರೈತರು ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯಗಳಿಸುವಂತೆ ಪ್ರೋತ್ಸಾಹ ನೀಡಲಾಗುವುದು"
-ಶ್ರೀರಾಮ್ ಹೆಗಡೆ, ನೋಡಲ್ ಅಧಿಕಾರಿ, ರಾಷ್ಟ್ರೀಯ ನೈಸರ್ಗಿಕ ಕಷಿ ಅಭಿಯಾನ ಉಡುಪಿ







