ಕಾವ್ರಾಡಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ನೌಶೀನ್ ಹಸರತ್, ಉಪಾಧ್ಯಕ್ಷರಾಗಿ ಸಂತೋಷ್ ಕುಮಾರ್ ಶೆಟ್ಟಿ ಆಯ್ಕೆ

ಕುಂದಾಪುರ: ಕಾವ್ರಾಡಿ ಗ್ರಾಮ ಪಂಚಾಯತಿ ಅಧ್ಯಕ್ಷರ ಆಯ್ಕೆಯಲ್ಲಿ ಕಾಂಗ್ರೆಸ್ ಬೆಂಬಲಿತ ಎಸ್.ಡಿ.ಪಿ.ಐ ನೌಶೀನ್ ಹಸರತ್ ಅಧ್ಯಕ್ಷರಾಗಿ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಸಂತೋಷ್ ಕುಮಾರ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಒಟ್ಟು 16 ಸದಸ್ಯ ಬಲವನ್ನು ಹೊಂದಿರುವ ಕಾವ್ರಾಡಿ ಗ್ರಾಮ ಪಂಚಾಯತಿಯಲ್ಲಿ 7 ಬಿಜೆಪಿ, 5 ಕಾಂಗ್ರೆಸ್, 4 ಎಸ್.ಡಿ.ಪಿ.ಐ ಬೆಂಬಲಿತರಿದ್ದರು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಆ.24ರಂದು ಚುನಾವಣೆ ನಡೆಯಿತು. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಬಿಗು ಪೈಪೋಟಿ ಏರ್ಪಟ್ಟಿದ್ದು ಚುನಾವಣೆ ಏರ್ಪಟ್ಟಾಗ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಎಸ್.ಡಿ.ಪಿ.ಐ ಬೆಂಬಲಿತರಾಗಿ ನೌಶೀನ್ ಹಸರತ್, ಬಿಜೆಪಿಯಿಂದ ಶ್ಯಾಮಲಾ ದೇವಾಡಿಗ ನಾಮಪತ್ರ ಸಲ್ಲಿಸಿದರು. ಮತ ಎಣಿಕೆಯಲ್ಲಿ ನೌಶಿನ್ ಅವರಿಗೆ 9 ಮತ, ಶ್ಯಾಮಲಾ ಅವರಿಗೆ 7 ಮತಗಳು ಲಭಿಸಿತ್ತು.
ಉಪಾಧ್ಯಕ್ಷ ಸ್ಥಾನಕ್ಕೂ ಚುನಾವಣೆ ಏರ್ಪಟ್ಟು ಬಿಜೆಪಿಯಿಂದ ಪ್ರಕಾಶಚಂದ್ರ ಶೆಟ್ಟಿ, ಕಾಂಗ್ರೆಸ್ ಬೆಂಬಲಿತರಾಗಿ ಸಂತೋಷ್ ಕುಮಾರ್ ಶೆಟ್ಟಿ ನಾಮಪತ್ರ ಸಲ್ಲಿಸಿದರು. ಸಂತೋಷ್ ಶೆಟ್ಟಿ ಅವರಿಗೆ 9 ಮತಗಳು, ಪ್ರಕಾಶ್ ಅವರಿಗೆ 7 ಮತಗಳು ಲಭಿಸಿ, ಕಾಂಗ್ರೆಸ್ ಬೆಂಬಲಿತ ಸಂತೋಷ್ ಕುಮಾರ್ ಶೆಟ್ಟಿ ವಿಜಯಿಯಾದರು.
ಸಂತೋಷ್ ಕುಮಾರ್ ಶೆಟ್ಟಿ ನಾಲ್ಕು ಬಾರಿ ಸದಸ್ಯರಾಗಿದ್ದು 3ನೇ ಬಾರಿ ಉಪಾಧ್ಯಕ್ಷರಾಗಿದ್ದಾರೆ. ನೌಶೀನ್ ಪ್ರಥಮ ಬಾರಿ ಸದಸ್ಯರಾಗಿ, ಕಳೆದ ಅವಧಿಯಲ್ಲಿ ಎರಡೂವರೆ ವರ್ಷ ಉಪಾಧ್ಯಕ್ಷರಾಗಿದ್ದು ಪ್ರಸ್ತುತ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.







