ಬಡವರ, ಅಸಹಾಯಕರ ಕಲ್ಯಾಣಕ್ಕೆ ಹೊಸ ಉಪಕ್ರಮ: ಉಡುಪಿ ಧರ್ಮಪ್ರಾಂತ- ಎಂಡಿಎಸ್ ಚಾರೀಟಿಸ್ ಒಪ್ಪಂದಕ್ಕೆ ಸಹಿ

ಉಡುಪಿ, ನ.26: ಮೈಕಲ್ ಡಿಸೋಜಾ ಚಾರಿಟೀಸ್ ಮತ್ತು ಉಡುಪಿ ಕಥೊಲಿಕ್ ಧರ್ಮಪ್ರಾಂತದ ನಡುವೆ ಬಡವರ ಕಲ್ಯಾಣ ಕಾರ್ಯಕ್ರಮ ಗಳಿಗಾಗಿ ಮುಂದಿನ ಐದು ವರ್ಷಗಳಿಗೆ ಅಧಿಕೃತ ಒಪ್ಪಂದಕ್ಕೆ ಸಹಿ ಹಾಕುವ ಪ್ರಕ್ರಿಯೆ ಗುರುವಾರ ಉಡುಪಿ ಧರ್ಮಾಧ್ಯಕ್ಷರ ನಿವಾಸದಲ್ಲಿ ನಡೆಯಿತು.
ಉಡುಪಿ ಕಥೊಲಿಕ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಅತಿ ವಂ. ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಹಾಗೂ ಎಂಡಿಎಸ್ ಚಾರಿಟೀಸ್ ಮುಖ್ಯಸ್ಥರಾದ ಮೈಕಲ್ ಡಿಸೋಜಾ ಅವರು ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು.
ಈ ವೇಳೆ ಮಾತನಾಡಿದ ಧರ್ಮಾಧ್ಯಕ್ಷರಾದ ಅತಿ ವಂ.ಡಾ. ಲೆಸ್ಲಿ ಡಿಸೋಜಾ, ಬಡವರ ಮತ್ತು ಅಶಕ್ತರ ಕಣ್ಣೀರು ಒರೆಸುವ ಕಾಯಕದಲ್ಲಿ ಉಡುಪಿ ಧರ್ಮಪ್ರಾಂತ ಕಳೆದ ಹದಿನೈದು ವರ್ಷಗಳಿಂದ ನಿರಂತರವಾಗಿ ತನ್ನ ಸೇವೆ ಯನ್ನು ನೀಡುತ್ತಾ ಬಂದಿದೆ. ಈ ಕಾಯಕಕ್ಕೆ ಉದ್ಯಮಿ ಕೊಡುಗೈ ದಾನಿಗಳಾದ ಮೈಕಲ್ ಡಿಸೋಜಾ ಅವರು ಧರ್ಮಪ್ರಾಂತದೊಂದಿಗೆ ಕೈಜೋಡಿಸುವ ಮೂಲಕ ಮತ್ತಷ್ಟು ಸೇವೆ ನೀಡಲು ಸಾಧ್ಯವಾಗಲಿದೆ ಎಂದರು.
ಕಳೆದ 15 ವರ್ಷಗಳಲ್ಲಿ ಶಿಕ್ಷಣ, ಬಡವರಿಗೆ ಮನೆ ನಿರ್ಮಾಣ ಸೇರಿದಂತೆ ಹಲವಾರ ಯೋಜನೆಗಳಿಗೆ ಎಂಡಿಎಸ್ ಚಾರಿಟೀಸ್ ಮೂಲಕ ಸುಮಾರು 13 ಕೋಟಿ ರೂ.ಗಳಿಗೂ ಅಧಿಕ ಮೊತ್ತವನ್ನು ವ್ಯಯಿಸಲಾಗಿದೆ. ಸಮುದಾಯದ ಹಿಂದುಳಿದ ಮಕ್ಕಳನ್ನು ಪ್ರೋತ್ಸಾಹಿಸುವುದರೊಂದಿಗೆ ಅವರಿಗೆ ಜೀವನದಲ್ಲಿ ಯಶಸ್ಸು ಕಾಣಲು ಸಹಕಾರ ನೀಡಲಾ ಗಿದೆ. ಇದರೊಂದಿಗೆ ಬಡ ಕುಟುಂಬಗಳ ನೋವಿನಲ್ಲಿ ಸಹಾಯ ಹಸ್ತ ಚಾಚುವ ಕೆಲಸ ಇನ್ನಷ್ಟು ಯಶಸ್ವಿಯಾಗಿ ಮುಂದುವರೆಯಲಿದೆ ಎಂದರು.
ಎಂಡಿಎಸ್ ಚಾರಿಟೀಸ್ ಮುಖ್ಯಸ್ಥ ಮೈಕಲ್ ಡಿಸೋಜಾ ಮಾತನಾಡಿ, ಟ್ರಸ್ಟಿನ ಮೂಲಕ ಸಮುದಾಯದ ಅಶಕ್ತ ರನ್ನು ಮೇಲೆತ್ತುವ ಕಾಯಕ ಮಾಡಿಕೊಂಡು ಬಂದಿರುವುದು ತನಗೆ ಹಾಗೂ ನನ್ನ ಕುಟುಂಬಕ್ಕೆ ಸಮಾಧಾನ ಮತ್ತು ನೆಮ್ಮದಿಯನ್ನು ನೀಡಿದೆ. ಸಮುದಾಯದ ಮಕ್ಕಳು ಸಮಾಜದಲ್ಲಿ ಉತ್ತಮ ಸ್ಥಾನವನ್ನು ಏರಬೇಕು ಈ ಮೂಲಕ ಹೆಚ್ಚಿನ ಸಾಧನೆ ಮಾಡಲು ಮುಂದೆಯೂ ಧರ್ಮಪ್ರಾಂತದೊಂದಿಗೆ ಬೆನ್ನೆಲುಬಾಗಿ ನಿಲ್ಲುವುದಾಗಿ ಹೇಳಿದರು.
ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ. ಡೆನಿಸ್ ಡೆಸಾ ಕಳೆದ 15 ವರ್ಷಗಳಲ್ಲಿ ಎಂಡಿಎಸ್ ಚಾರಿಟೀಸ್ ಮೂಲಕ ಧರ್ಮಪ್ರಾಂತದ ಎಡ್ಯುಕೇರ್ ಶೈಕ್ಷಣಿಕ ಸಹಾಯ, ಮನೆ ನಿರ್ಮಾಣಕ್ಕೆ ಅನುದಾನ, ಮೂರನೇ ಮಗುವಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಧರ್ಮಪ್ರಾಂತದ ವ್ಯಾಪ್ತಿಯಲ್ಲಿ ಲಭಿಸಿದ ಅನುದಾನಗಳ ಸಮಗ್ರ ಮಾಹಿತಿ ನೀಡಿದರು.
ಉಡುಪಿ ಧರ್ಮಪ್ರಾಂತದ ಶ್ರೇಷ್ಠ ಗುರು ಅತಿ ವಂ. ಫ್ರಾನ್ಸಿಸ್ ಎಫ್ ಲೂವಿಸ್, ಕುಲಪತಿ ವಂ.ಸ್ಟೀವನ್ ಡಿಸೋಜಾ, ಜುಡಿಶೀಯಲ್ ವಿಕಾರ್ ವಂ. ಡಾ. ರೋಶನ್ ಡಿಸೋಜಾ, ಸಂಪದ ನಿರ್ದೇಶಕ ವಂ. ರೆಜಿನಾಲ್ಡ್ ಪಿಂಟೊ, ಸೆನೆಟ್ ಸಭೆಯ ಸಹಕಾರ್ಯದರ್ಶಿ ವಂ. ವಿಲ್ಸನ್ ಡಿಸೋಜಾ, ಶಿರ್ವ ವಲಯ ಪ್ರಧಾನ ಧರ್ಮಗುರು ವಂ. ಚಾರ್ಲ್ಸ್ ಮಿನೇಜಸ್, ಎಂಡಿಎಸ್ ಚಾರಿಟೀಸ್‌ನ ಫ್ಲೇವಿ ಡಿಸೋಜಾ, ಲೈನಲ್ ಆರಾನ್ಹಾ, ಓಸ್ವಲ್ಡ್ ರೊಡ್ರಿಗಸ್, ಶುಭಾ ರೊಡ್ರಿಗಸ್ ಉಪಸ್ಥಿತರಿದ್ದರು.






