ಕಾರ್ಕಳ: ಮದುವೆಯಾದ ಒಂದೇ ವಾರದಲ್ಲಿ ಮದುಮಗ ನಾಪತ್ತೆ

ಕಾರ್ಕಳ: ಮದುವೆಯಾದ ಒಂದೇ ವಾರದಲ್ಲಿ ಮದುಮಗ ನಾಪತ್ತೆಯಾಗಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾದವರನ್ನು ವಸಂತ ಬಿ. ಎಂದು ಗುರುತಿಸಲಾಗಿದೆ.
ಇವರು ಕಾರ್ಕಳ ಈದು ಗ್ರಾಮದ ಶರ್ಮೀಳಾ ಎ.ಸಿ ಎಂಬವರನ್ನು ಅ.29ರಂದು ಪುತ್ತೂರಿನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಮದುವೆಯಾಗಿದ್ದರು. ನ.6ರಂದು ಪತ್ನಿ ಜೊತೆ ಪತ್ನಿಯ ಮನೆ ಈದು ಗ್ರಾಮಕ್ಕೆ ಬಂದಿದ್ದು, ನ.7ರಂದು ದೇವಸ್ಥಾನಗಳಿಗೆ ಹೋಗಿ, ಸಂಜೆ 4 ಗಂಟೆಗೆ ಹೊಸ್ಮಾರು ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ. ಅವರ ಮೊಬೈಲ್ ಫೋನ್ ಸ್ವಿಚ್‌ಆಫ್ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story





