ನವವಿವಾಹಿತೆ ನಾಪತ್ತೆ

ಕುಂದಾಪುರ, ನ.15: ಆರು ತಿಂಗಳ ಹಿಂದೆ ಮದುವೆಯಾಗಿದ್ದ ಕೋಣಿಯ ಪ್ರಶಾಂತ ಎಂಬವರ ಪತ್ನಿ ನಿಶ್ಮಿತಾ(22) ಎಂಬವರು ನ.15ರಂದು ಬೆಳಗ್ಗೆ ಮನೆಯಿಂದ ನಾಪತ್ತೆಯಾಗಿದ್ದಾರೆ.
ಗೋಧಿ ಬಣ್ಣ, ಸಪುರ ಶರೀರ, 5 ಅಡಿ ಎತ್ತರ ಹೊಂದಿರುವ ಇವರು ಕನ್ನಡ ಭಾಷೆ ಮಾತನಾಡಬಲ್ಲರು. ಮನೆಯಿಂದ ಹೋಗುವಾಗ ಈಕೆ ಹಸಿರು ಬಣ್ಣದ ಚೂಡಿದಾರ ಮತ್ತು ಪ್ಯಾಂಟ್ ಧರಿಸಿದ್ದರು. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





