ಕಾರ್ಕಳ: ಬಂಗ್ಲೆಗುಡ್ಡೆಯಲ್ಲಿ ಸಂಭ್ರಮದ ಮೀಲಾದುನ್ನಬಿ ಆಚರಣೆ

ಕಾರ್ಕಳ, ಸೆ.28: ಬಂಗ್ಲೆಗುಡ್ಡೆ ಹಯಾತುಲ್ ಇಸ್ಲಾಂ ಅಸೋಸಿಯೇಶನ್ ಹಾಗೂ ತ್ವೈಬಾ ಗಾರ್ಡನ್ ಆಶ್ರಯದಲ್ಲಿ ಬಂಗ್ಲೆಗುಡ್ಡೆ ಸಲ್ಮಾನ್ ಜುಮಾ ಮಸೀದಿಯ ವಠಾರದಲ್ಲಿ ಮೀಲಾದುನ್ನಬಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ತ್ವೈಬಾ ಗಾರ್ಡನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶರೀಫ್ ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಬಳಿಕ ಸಲ್ಮಾನ್ ಜುಮಾ ಮಸೀದಿಯಿಂದ ಬಂಗ್ಲೆಗುಡ್ಡೆ ಜಂಕ್ಷನ್ ವರೆಗೆ ಮೀಲಾದ್ ಜಾಥಾ ನಡೆಯಿತು. ಅಲ್ ಅಯ್ಯೂಬ್ ಮದ್ರಸ, ಝಿಹಾ ಎ ಮುಸ್ತಫ ಹನಫಿ ಮದ್ರಸ, ತ್ವೈಬಾ ದಾವಾ ಕಾಲೇಜು, ಝಹ್ರತುಲ್ ಕುರ್ ಆನ್, ತ್ವೈಬಾ ಗಾರ್ಡನ್ ಇಂಗ್ಲಿಷ್ ಮೀಡಿಯಂ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ತ್ವೈಬಾ ಗಾರ್ಡನ್ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ಅಹ್ಮದ್ ಶರೀಫ್ ಸಅದಿ ಕಿಲ್ಲೂರು, ಝೈನುಲ್ ಆಬಿದ್ ಸಖಾಫಿ ಮಾಗುಂಡಿ, ಝಭೈರ್ ಸಖಾಫಿ ಹಾಕತ್ತೂರು, ಅಬ್ದುಲ್ ಖಾದರ್ ಮದನಿ, ಸುಲೈಮಾನ್ ಸಖಾಪಿ ಸಜಿಪ, ಯೂನುಸ್ ಅಹ್ಸನಿ ಕಡಬ, ಮುನೀರ್ ಹಿಮಾಮಿ ಕಬಕ, ಮೌಲಾನ ಅಶ್ಫಾಕ್, ಹಯಾತುಲ್ ಇಸ್ಲಾಂ ಅಸೋಸಿಯೇಶನ್ ಮಾಜಿ ಅಧ್ಯಕ್ಷರಾದ ಹನೀಫ್, ಬಶೀರ್, ರಜಬ್ ಪರನೀರು, ಮಾಜಿ ಉಪಾಧ್ಯಕ್ಷ ಕೆ ನೂರುದ್ದೀನ್, ಎಸ್ಸೆಸ್ಸೆಫ್ ಮುಖಂಡರಾದ ರಫೀಕ್, ದಾವೂದ್, ಅಲ್ತಾಫ್, ಮೊಯ್ದಿನ್ , ಫಯಾಝ್, ಮುನೀರ್, ಮುಷ್ತಾಕ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.







