ಶೇಖರ ಪೂಜಾರಿ ತಲ್ಲೂರು ನಿಧನ

ಕುಂದಾಪುರ: ತಲ್ಲೂರಿನ ಪ್ರಸಿದ್ಧ ಸಮಾಜ ಸೇವಕ ಶೇಖರ ಪೂಜಾರಿ ತಲ್ಲೂರು (56) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ತಡರಾತ್ರಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅನೇಕ ವರ್ಷಗಳಿಂದ ಆಟೋರಿಕ್ಷಾ ಚಾಲಕರಾಗಿ ವೃತ್ತಿ ನಿರತರಾಗಿದ್ದ ಅವರು ತಮ್ಮ ಸಮಾಜ ಸೇವೆಯಿಂದಾಗಿ ಪರಿಸರ ದಲ್ಲಿ ಜನಾನುರಾಗಿಯಾಗಿದ್ದರು. ಸ್ಥಳೀಯ ಆಟೋರಿಕ್ಷಾ ಸಂಘಟನೆ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದ ಅವರು ರಾಜಕೀಯವಾಗಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು.
ಮೃತರಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಹರತಾಳ : ಶೇಖರ ಪೂಜಾರಿ ಅವರ ನಿಧನದ ಗೌರವಾರ್ಥ ತಲ್ಲೂರು ಪರಿಸರದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಹರತಾಳ ನಡೆಸಲಾಯಿತು. ಸಂಜೆ ತಲ್ಲೂರಿನ ಮನೆಯಿಂದ ಕುಂದಾಪುರದವರೆಗೂ ಪಾರ್ಥೀವ ಶರೀರದ ಮೆರವಣಿಗೆ ನಡೆಸಿದ ಬಳಿಕ ಚಿಕ್ಕನ್ ಸಾಲ್ ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಹಿರಿಯ ವಕೀಲ ಟಿ.ಬಿ.ಶೆಟ್ಟಿ, ಉದ್ಯಮಿ ರಾಜೇಶ್ ಕಾರಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ತಾ.ಪಂ ಮಾಜಿ ಸದಸ್ಯ ಕರಣ್ ಪೂಜಾರಿ ಮುಂತಾದವರು ಮೃತರ ಅಂತಿಮ ದರ್ಶನ ಪಡೆದುಕೊಂಡರು.







