ಉಡುಪಿ: ಕೆರೆಗಳ ಮಹತ್ವದ ಬಗ್ಗೆ ಕಮ್ಮಟ

ಉಡುಪಿ, ನ.24: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಧರ್ಮಸ್ಥಳ ಮತ್ತು ನಮ್ಮೂರು ನಮ್ಮ ಕೆರೆ ಉಡುಪಿ ಜಿಲ್ಲಾ ಮಟ್ಟದ ಕೆರೆ ಅಭಿವೃದ್ದಿ ಸಮಿತಿಯ ಪದಾಧಿಕಾರಿಗಳ ಸಭೆ ಉಡುಪಿ ಪ್ರಗತಿ ಸೌಧದಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು, ನಮ್ಮ ಪೂರ್ವಜರು ನಿರ್ಮಿಸಿದ ಕೆರೆಗಳ ಮಹತ್ವ ಹಾಗೂ ನೀರಿನ ಮಹತ್ವದ ಬಗ್ಗೆ ವಿವರಿಸಿದರು.
ಧರ್ಮಸ್ಥಳ ಕೇಂದ್ರ ಕಚೇರಿಯ ಕೆರೆ ಮತ್ತು ಶುದ್ಧಗಂಗಾ ವಿಭಾಗದ ನಿರ್ದೇಶಕರಾದ ಶಿವಾನಂದ ಆಚಾರ್ಯ ಅವರು ಕೆರೆ ಸಮಿತಿಯ ಜವಾಬ್ದಾರಿ ಮತ್ತು ಇಲಾಖೆ ಸೌಲಭ್ಯ ಬಗ್ಗೆ ಮಾಹಿತಿಗಳನ್ನು ನೀಡಿದರು. ಜಯಂಟ್ಸ್ ಸಂಸ್ಥೆಯ ಮಧುಸೂದನ ಹೇರೂರು ಜೀವ ರಾಶಿಯ ಉಳಿವಿಗೆ ನಮ್ಮ ಸಮಾಜದ ಜವಾಬ್ದಾರಿ ನೀರಿನ ಅನಿವಾರ್ಯತೆ ಹಾಗೂ ಕೆರೆಗಳ ಮಹತ್ವ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಧುಸೂದನ್ ಹೇರೂರು ಅವರ ಪರಿಸರ ಸೇವೆಯನ್ನು ಗುರುತಿಸಿ ಫಲಪುಷ್ಪದೊಂದಿಗೆ ಶಾಲು ಹೊದಿಸಿ ಗೌರವಿಸಲಾ ಯಿತು. ಸಭೆಯಲ್ಲಿ ಉಡುಪಿ, ಕಾಪು, ಹೆಬ್ರಿ, ಬ್ರಹ್ಮಾವರ, ಕುಂದಾಪುರ, ಕುಂದಾಪುರ, ಕಾರ್ಕಳ ತಾಲೂಕುಗಳ ಯೋಜನಾಧಿಕಾರಿಗಳು ಮತ್ತು ಕೃಷಿ ಮೇಲ್ವಿಚಾರಕರು, ಕೆರೆ ಸಮಿತಿಯ ಪದಾಧಿಕಾರಿಗಳು ಹಾಗೂ ಕೆರೆ ಇಂಜಿನಿಯರ್ ಭರತ್ ಉಪಸ್ಥಿತರಿದ್ದರು.
ಯೋಜನೆಯ ಬಾಲಚಂದ್ರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.





