ಕೃಷಿಕ ಗಿರಿಯ ಪೂಜಾರಿ ನಿಧನ

ಉಡುಪಿ : ಅಂಬಲಪಾಡಿ ಗ್ರಾಮದ ಜತ್ತರಬೆಟ್ಟು ನಿವಾಸಿ ಹಿರಿಯ ಕೃಷಿಕ ಗಿರಿಯ ಪೂಜಾರಿ(94) ಅಲ್ಪಕಾಲದ ಅಸೌಖ್ಯ ದಿಂದ ಇಂದು ಸ್ವಗೃಹದಲ್ಲಿ ನಿಧನರಾದರು.
ಇವರು ಅಂಬಲಪಾಡಿ ಬಿಲ್ಲವ ಸೇವಾ ಸಂಘದ ಸ್ಥಾಪಕ ಸದಸ್ಯರಾಗಿದ್ದು, ನಿರಂತರ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುವ ಜೊತೆಗೆ ಅಡುಗೆ ತಯಾರಕರಾಗಿಯೂ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಐವರು ಪುತ್ರಿಯರ ಸಹಿತ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.
Next Story





