ಕುಕ್ಕಿಕಟ್ಟೆ: ಉಚಿತ ಕಣ್ಣಿನ ತಪಾಸಣಾ ಶಿಬಿರ

ಉಡುಪಿ : ಸಾಲಿಡಾರಿಟಿ ಯೂತ್‌ಮೂವ್ಮೆಂಟ್ ಉಡುಪಿ ಜಿಲ್ಲೆ, ಎಚ್‌ಆರ್‌ಎಸ್ ಉಡುಪಿ ಮತ್ತು ಶ್ರೀಹರಿ ನೇತ್ರಾಲಯ ಮತ್ತು ಕುಕ್ಕಿಕಟ್ಟೆ ಇಂದಿರಾ ನಗರದ ಉಮರ್ ಖತ್ತಾಬ್ ಮಸೀದಿಯ ಸಹಯೋಗದೊಂದಿಗೆ ಉಚಿತ ನೇತ್ರಾ ತಪಾಸಣಾ ಕಾರ್ಯಕ್ರಮವನ್ನು ರವಿವಾರ ಮಸೀದಿ ವಠಾರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶಿಬಿರವನ್ನು ಉದ್ಘಾಟಿಸಿದ, ಶ್ರೀಹರಿ ನೇತ್ರಾಲಯದ ತಜ್ಞ ವೈದ್ಯ ಡಾ. ಹರಿಪ್ರಸಾದ್ ಒಕ್ಕೂಡ ಮಾತನಾಡಿ, ಕಣ್ಣು ದೇವನ ಅತೀ ದೊಡ್ಡ ಕೊಡುಗೆ ಯಾಗಿದೆ. ಅದರ ಸುರಕ್ಷತೆ ಅತೀ ಅಗತ್ಯೆ. ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಂಡಾಗ ಅದನ್ನು ನಿರ್ಲಕ್ಷಿಸದೆ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.
ಜಮಾಅತೆ ಇಸ್ಲಾಮಿ ಹಿಂದ್‌ನ ರಿಯಾಝ್ ಕುಕ್ಕಿಕಟ್ಟೆ ಮಾತನಾಡಿದರು. ಈ ಸಂದರ್ಭ ನೇತ್ರ ತಜ್ಞರಾದ ಡಾ.ರೂಪಶ್ರೀ ರಾವ್, ಸಾಲಿಡಾರಿಟಿ ಯೂತ್‌ಮೂವ್ಮೆಂಟ್ ಜಿಲ್ಲಾಧ್ಯಕ್ಷ ನಬೀಲ್ ಗುಜ್ಜರ್‌ಬೆಟ್ಟು, ಮಸೀದಿಯ ಅಧ್ಯಕ್ಷ ಯುಸೂಫ್ ಖಾನ್, ಉಪಾಧ್ಯಕ್ಷ ಮಕ್ಸೂದ್, ಸಾಲಿಡಾರಿಟಿಯ ಪರ್ವೆಝ್ ಕುಕ್ಕಿಕಟ್ಟೆ, ಸಮಾಜ ಸೇವಕ ನಾಸಿರ್ ಕುಕ್ಕಿಕಟ್ಟೆ ಉಪಸ್ಥಿತರಿದ್ದರು.
ಮಸೀದಿಯ ಉಪಾಧ್ಯಕ್ಷರಾದ ಮಕ್ಸೂದ್ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ನೂರಾರು ಫಲಾನುಭವಿಗಳು ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.







