‘ಬಿಸಿಲ್ಗುದುರೆಯ ಬೆನ್ನೇರಿದವ’, ‘ಬಾಲಂಗೋಚಿ’ ಕೃತಿಗಳ ಬಿಡುಗಡೆ

ಉಡುಪಿ, ಡಿ.2: ಉಡುಪಿ ಸುಹಾಸಂ ಮತ್ತು ಮಂಗಳೂರು ಕಲ್ಕೂರ ಪ್ರತಿಷ್ಠಾನದ ವತಿಯಿಂದ ಲೇಖಕ ಎಚ್.ಶಾಂತರಾಜ ಐತಾಳ್ ಅವರ ‘ಬಿಸಿಲ್ಗುದುರೆಯ ಬೆನ್ನೇರಿದವ’ ಮತ್ತು ‘ಬಾಲಂಗೋಚಿ’ ಕೃತಿಗಳ ಬಿಡುಗಡೆ ಸಮಾರಂಭವು ಶನಿವಾರ ಉಡುಪಿ ಕಿದಿಯೂರು ಹೊಟೇಲಿನ ಸಭಾಂಗಣದಲ್ಲಿ ನಡೆಯಿತು.
ಕೃತಿಗಳನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ವಹಿಸಿದ್ದರು. ವಿದ್ಯಾ ಪ್ರಸಾದ್ ಉಡುಪಿ ಕೃತಿ ಪರಿಚಯ ಮಾಡಿದರು.
ವೇದಿಕೆಯಲ್ಲಿ ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಭುವನ ಪ್ರಸಾದ್ ಹೆಗ್ಡೆ, ಸುಹಾಸಂ ಕಾರ್ಯದರ್ಶಿ ಎಚ್.ಗೋಪಾಲ ಭಟ್ ಉಪಸ್ಥಿತರಿದ್ದರು. ಸುಹಾಸಂ ಅಧ್ಯಕ್ಷ ಎಚ್.ಶಾಂತರಾಜ ಐತಾಳ್ ಸ್ವಾಗತಿಸಿದರು. ಡಾ.ಸಪ್ನಾ ಜೆ.ಉಕ್ಕಿನಡ್ಕ ವಂದಿಸಿದರು. ಶ್ರೀನಿವಾಸ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು.
Next Story





