ಮರಣಪತ್ರ ಬರೆದಿಟ್ಟು ಮಹಿಳೆ ನಾಪತ್ತೆ

ಬ್ರಹ್ಮಾವರ, ಡಿ.2: ಮರಣ ಪತ್ರ ಬರೆದಿಟ್ಟು ಮಹಿಳೆಯೊಬ್ಬರು ನಾಪತ್ತೆ ಯಾಗಿರುವ ಘಟನೆ ನ.30ರಂದು ಉಪ್ಪಿನಕೋಟೆ ಎಂಬಲ್ಲಿ ನಡೆದಿದೆ.
ಉಪ್ಪಿನಕೋಟೆಯ ಲಲಿತಾ(31) ಎಂಬವರು ಮನೆಯಲ್ಲಿ ಸಣ್ಣ ಸಣ್ಣ ಮೂರು ಚೀಟಿಯಲ್ಲಿ ಹಾಗೂ ಪುಸ್ತಕದ ಹಾಳೆಯಲ್ಲಿ ನನ್ನ ಸಾವಿಗೆ ಯಾರೂ ಕಾರಣ ಅಲ್ಲ, ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿಟ್ಟು ಮನೆಯಿಂದ ಹೋದವರು ನಾಪತ್ತೆಯಾಗಿ ದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





