ಸಾಲಬಾಧೆ: ವ್ಯಾಪಾರಿ ಆತ್ಮಹತ್ಯೆ

ಕುಂದಾಪುರ, ಡಿ.4: ಸಾಲಬಾಧೆಯಿಂದ ಮೀನು ವ್ಯಾಪಾರಸ್ಥರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ.3ರಂದು ಬೀಜಾಡಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಕೋಟತಟ್ಟು ನಿವಾಸಿ ಉದಯ(47) ಎಂದು ಗುರುತಿಸಲಾಗಿದೆ. ಇವರು ಬೀಜಾಡಿ ಗ್ರಾಮದ ಕಟ್ಟಡದಲ್ಲಿ ಮೀನು ಅಂಗಡಿ ಇಟ್ಟುಕೊಂಡು ವ್ಯವಹಾರ ಮಾಡಿಕೊಂಡಿದ್ದು, ಸಾಲಬಾಧೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಅವರು ಅಂಗಡಿಯ ಒಳಗಡೆ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





