ಸಾಂಪ್ರದಾಯಕ ಕುಚ್ಚೂರು ಕಂಬಳದ ಸಮಾರೋಪ

ಹೆಬ್ರಿ, ಡಿ.6: ಕೊಡಮಣಿತ್ತಾಯ ಮತ್ತು ಧೂಮಾವತಿ ಗರಡಿಯ ಸಾಂಪ್ರ ದಾಯಕ ಕುಚ್ಚೂರು ಕಂಬಳದ ಸಮಾರೋಪ ಸಮಾರಂಭ ಮಂಗಳವಾರ ಜರಗಿತು.
ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಬೆಂಗಳೂರಿನ ಉದ್ಯಮಿಗಳಾದ ಬಾಬು ರೆಡ್ಡಿ, ರಾಮಚಂದ್ರ ರೆಡ್ಡಿ, ರವಿ ರೆಡ್ಡಿ, ವಸಂತ ರೆಡ್ಡಿ, ಎಚ್.ಆರ್.ಮಧು ಸೂದನ್ ರೆಡ್ಡಿ ಹಾಗೂ ಶ್ರೀಪತಿ ರಾವ್ ಅವರನ್ನು ಗೌರವಿಸಲಾಯಿತು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಾಂತರಾಮ ಶೆಟ್ಟಿ ಬಾರ್ಕೂರು ಮಾತನಾಡಿದರು. ಅಧ್ಯಕ್ಷತೆಯನ್ನು ಕಂಬಳ ಕ್ರೀಡಾ ಸಮಿತಿಯ ಅಧ್ಯಕ್ಷ ನಿತ್ಯಾನಂದ ಭಟ್ ವಹಿಸಿದ್ದರು.
ಕುಚ್ಚೂರು ಗ್ರಾಪಂ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷ ಮಹೇಶ್ ಶೆಟ್ಟಿ ಬಾದ್ಲು, ಸಿಎ ಎಚ್.ಆರ್.ಶೆಟ್ಟಿ, ಮೂಡುಬಿದರೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ, ಕೊಡಮಣಿತ್ತಾಯ ಮತ್ತು ಧೂಮಾವತಿ ಗರಡಿ ಆಡಳಿತ ಮಂಡಳಿ ಟ್ರಸ್ಟ್ ಗೌರವಾಧ್ಯಕ್ಷ ಬಾಲಕೃಷ್ಣ ರಾವ್ ಕುಚ್ಚೂರು, ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿ.ಕರುಣಾಕರ ಶೆಟ್ಟಿ, ಉದ್ಯಮಿ ಹರ್ಷ ಶೆಟ್ಟಿ, ಕೊಡಮಣಿತ್ತಾಯ ಮತ್ತು ಧೂಮಾವತಿ ಗರಡಿ ಆಡಳಿತ ಮಂಡಳಿ ಟ್ರಸ್ಟ್ ಅಧ್ಯಕ್ಷ ಕಿರಣ್ ತೋಳಾರ್, ಕಂಬಳ ಸಮಿತಿಯ ಗೌರವಾಧ್ಯಕ್ಷ ಸತೀಶ್ ಶೆಟ್ಟಿ ಜಾರ್ಮಕ್ಕಿ, ರಮೇಶ್ ಪೂಜಾರಿ, ಅಣ್ಣಯ್ಯ ಅಂಬಿಗ ಉಪಸ್ಥಿತರಿದ್ದರು. ಮಹೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







