ಪ್ರಧಾನಮಂತ್ರಿ ಕೃ ಸಿಂಚಾಯಿ ಯೋಜನೆ: ಅರ್ಜಿ ಆಹ್ವಾನ

ಉಡುಪಿ, ಡಿ.6: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ-ಇತರೆ ಉಪಚಾರಗಳು ಕಾರ್ಯಕ್ರಮದಡಿ ವೈಯಕ್ತಿಕ ನೀರು ಸಂಗ್ರಹಣಾ ವಿನ್ಯಾಸ, ಅಂತರ್ಜಲ ಸುರಕ್ಷಿತ ಪ್ರದೇಶಗಳಲ್ಲಿ ಅಲ್ಪ/ ಮದ್ಯಮ ಆಳದ ಕೊಳವೆ ಬಾವಿಗಳು (ಕೇಂದ್ರೀಯ ಅಂತರ್ಜಲ ಮಂಡಳಿಯಿಂದ ಅಧಿಸೂಚನೆಯಾಗಿರುವ ಶೋಷಿತ ನಿರ್ಣಾಯಕ ಮತ್ತು ಅರೆ ನಿರ್ಣಾಯಕ ಪ್ರದೇಶಗಳನ್ನು ಹೊರತುಪಡಿಸಿ), ಸಣ್ಣ ಬಾವಿಗಳ ಮರುಸ್ಥಾಪನೆ/ ನವೀಕರಣ ಅಥವಾ ಸ್ಥಗಿತಗೊಂಡಿರುವ ಕೊಳವೆ ಬಾವಿಗಳ ಮರು ಪೂರಣ, ಪೈಪ್/ ಪ್ರಿ-ಕಾಸ್ಟ್ ವಿತರಣಾ ವ್ಯವಸ್ಥೆ ಹಾಗೂ ನೀರೆತ್ತುವ ಸಾಧನಗಳು (ವಿದ್ಯುತ್, ಡೀಸೆಲ್, ಪವನ/ಸೌರ) ಕೃಷಿ ಇಲಾಖೆಯಲ್ಲಿ ಲಭ್ಯವಿದ್ದು, ಈ ಚಟುವಟಿಕೆಗಳಿಗೆ ಗರಿಷ್ಠ 75,000 ರೂ. ಮಿತಿಗೆ ಒಳಪಟ್ಟು ಸೌಲಭ್ಯಗಳನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಉಡುಪಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Next Story





