ರಾಜ್ಯ ಶಾರ್ಟ್‌ಕೋರ್ಸ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್‌ಗೆ ಚಾಲನೆ

ಉಡುಪಿ, ಡಿ.7: ಕರ್ನಾಟಕ ರಾಜ್ಯ ಸ್ವಿಮ್ಮಿಂಗ್ ಅಸೋಸಿಯೇಶನ್ ವತಿಯಿಂದ ಅಜ್ಜರಕಾಡು ಜಿಲ್ಲಾ ಈಜುಕೊಳದಲ್ಲಿ ನಾಲ್ಕು ದಿನಗಳ ಕಾಲ ಹಮ್ಮಿಕೊಳ್ಳಲಾದ 23ನೇ ರಾಜ್ಯ ಶಾರ್ಟ್ ಕೋರ್ಸ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್‌ಗೆ ಇಂದು ಚಾಲನೆ ನೀಡಲಾಯಿತು.
14, 17 ಮತ್ತು 19ವರ್ಷ ಕೆಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಒಟ್ಟು 480 ಸ್ಪರ್ಧಿಗಳು ಭಾಗವಹಿಸಿದ್ದಾರೆ. ಫ್ರಿ ಸ್ಟೈಲ್‌ನಲ್ಲಿ 25, 50, 100, 200, 400, 800 ಹಾಗೂ 1500 ಮೀಟರ್, ಉಳಿದ ಸ್ಟ್ರೋಕ್‌ನಲ್ಲಿ 50, 100,200 ಮೀಟರ್ ದೂರದ ಈಜು ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಸ್ಪರ್ಧೆಯಲ್ಲಿ ಸುಮಾರು 40 ಮಂದಿ ಅಧಿಕಾರಿಗಳು ತೊಡಗಿಸಿಕೊಂಡಿದ್ದು, ಇಲ್ಲಿ ಮುಕ್ತ ವಿಭಾಗದಲ್ಲೂ ಭಾಗವಹಿಸುವವರಿಗೂ ಅವಕಾಶವನ್ನು ಕಲ್ಪಿಸ ಲಾಗಿದೆ. ಇದರಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರು ಡಿ.27ರಿಂದ 29ರವರೆಗೆ ಬೆಂಗಳೂರಿನಲ್ಲಿ ನಡೆಯುವ ಏಳು ರಾಜ್ಯಗಳ ಸೌತ್ ರೆನ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಸ್ವಿಮ್ಮಿಂಗ್ ಅಸೋಸಿಯೇಶನ್ ಉಪಾಧ್ಯಕ್ಷ ರಕ್ಷಿತ್ ಜಗದಾಳೆ, ಸ್ವಿಮ್ಮಿಂಗ್ ಡೆವಲಪ್‌ಮೆಂಟ್ ಆಫೀಸರ್ ರೋಹಿತ್ ಬಾಬು, ಈಜು ತರಬೇತುದಾರರಾದ ಲೋಕರಾಜ್, ಬ್ರಿಜೇಶ್, ಸ್ಕಂದ ಮೊದಲಾದವರು ಉಪಸ್ಥಿತರಿದ್ದರು.







