ಸೇವಾದಳ ಪುನಶ್ಚೇತನ ಶಿಬಿರ-ನೊಂದಾವಣಿ ಕಾರ್ಯಕ್ರಮ

ಬೈಂದೂರು, ಡಿ.7: ಭಾರತ ಸೇವಾದಳ ಬೈಂದೂರು ಘಟಕದ ವತಿಯಿಂದ ಬೈಂದೂರು ವಲಯದ ಭಾರತ ಸೇವಾದಳ ಶಿಕ್ಷಕರಿಗೆ ಒಂದು ದಿನದ ಸೇವಾದಳ ಪುನಶ್ಚೇತನ ಶಿಬಿರ ಮತ್ತು ಶಾಖಾ ನೊಂದಾವಣಿ ಕಾರ್ಯಕ್ರಮ ಉಪ್ಪುಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಭಾರತ್ ಸೇವಾದಳ ಸಮಿತಿಯ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಗಂಟಿಹೊಳೆ ಶಿಬಿರದ ಧ್ವಜಾರೋಹಣಗೈದರು. ಶಿಬಿರವನ್ನು ಜಿಲ್ಲಾ ಸಮಿತಿಯ ಅಧ್ಯಕ್ಷ ಅಂಡಾರು ದೇವಿ ಪ್ರಸಾದ ಶೆಟ್ಟಿ ಉದ್ಘಾಟಿಸಿದರು. ಕೇಂದ್ರ ಸಮಿತಿಯ ಸದಸ್ಯ ಆರೂರು ತಿಮ್ಮಪ್ಪ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅತಿಥಿಗಳಾಗಿ ಬೈಂದೂರು ತಾಲೂಕು ದೈಹಿಕ ಶಿಕ್ಷಣ ಅಧಿಕಾರಿ ಚಂದ್ರಶೇಖರ ಶೆಟ್ಟಿ, ಉಪ್ಪುಂದ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ, ಬೈಂದೂರು ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶೇಖರ ಪೂಜಾರಿ, ಬೈಂದೂರು ತಾಲೂಕು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಮುಖ್ಯೋಪಾಧ್ಯಾಯ ವೆಂಕ ಉಪ್ಪಾರ ಶುಭ ಹಾರೈಸಿದರು.
ಭಾರತ್ ಸೇವಾದಳ ಉಡುಪಿ ಜಿಲ್ಲಾ ಸಂಘಟಕ ಪುಷ್ಪಾವತಿ ಎಸ್.ಗೌಡ ಶಿಬಿರ ನಡೆಸಿಕೊಟ್ಟರು. ಅಧಿ ನಾಯಕ ನಿತ್ಯಾನಂದ ಸ್ವಾಗತಿಸಿ, ಜ್ಯೋತಿ ಎಸ್ ವಂದಿಸಿದರು. ಸಮಿತಿಯ ಸದಸ್ಯ ರಾಘವೇಂದ್ರ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.







