ಕಾರ್ಟೂನ್ ಹಬ್ಬಕ್ಕೆ ಶುಭಕೋರವ ಮರಳು ಶಿಲ್ಪ

ಕುಂದಾಪುರ, ಡಿ.7: ಕುಂದೇಶ್ವರ ದೀಪೋತ್ಸವದ ಸಂದರ್ಭದಲ್ಲಿ ಪ್ರಸ್ತುತ ಪಡಿಸುವ 10ನೇ ವರ್ಷದ ಕಾರ್ಟೂನ್ ಹಬ್ಬಕ್ಕೆ ಶುಭಕೋರುವ ಮರಳ ಶಿಲ್ಪವನ್ನು ಕೋಟೇಶ್ವರದ ಹಳೆಅಳಿವೆ ಕಡಲ ತೀರದಲ್ಲಿ ಗುರುವ ಆರ ರಚಿಸಲಾಯಿತು.
ಕುಂದೇಶ್ವರ ದೇವರನ್ನು ಕೇಂದ್ರವಾಗಿಸಿ, ಜನರ ಮನೋ ಭಿಲಾಷೆಯ ವಿವಿಧ ಹಸನ್ಮುಖಗಳ ಭಾವನೆಯಗಳ ಮುಖ ಗಳೊಂದಿಗೆ, ಕಾರ್ಟೂನ್ ಹಬ್ಬಕ್ಕೂ ಸ್ವಾಗತ ಎಂಬ ಧ್ಯೇಯದೊಂದಿಗೆ 4 ಅಡಿ ಮತ್ತು 7.5 ಅಡಿ ಎತ್ತರ ಹಾಗೂ ಅಗಲದ ಮರಳು ಕಲಾಕೃತಿಯನ್ನು ಸ್ಯಾಂಡ್ ಥೀಂ ಉಡುಪಿ ತಂಡದ ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ನಿಟ್ಟೆ ರಚಿಸಿದರು.
ಈ ಸಂದರ್ಭದಲ್ಲಿ ಕಾರ್ಟೂನ್ ಹಬ್ಬದ ನೇತಾರ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ, ಕೇಶವ ಸಸಿಹಿತ್ಲು, ಚಂದ್ರಶೇಖರ ಶೆಟ್ಟಿ ಮತ್ತು ಬಳಗದವರು ಉಪಸ್ಥಿತರಿದ್ದರು.
Next Story





