ಯಕ್ಷಗಾನ ತರಬೇತಿ ಕಲಿಕೆಗೆ ಪೂರಕ: ಕೆ.ರಘುಪತಿ ಭಟ್
ಬ್ರಹ್ಮಾವರದ ಕಿಶೋರ ಯಕ್ಷಗಾನ ಸಮಾರೋಪ

ಬ್ರಹ್ಮಾವರ, ಡಿ.7: ಯಕ್ಷಗಾನ ವಿದ್ಯಾರ್ಥಿಗಳ ಪ್ರತಿಭೆಯನ್ನು ಬೆಳಗಿಸುವುದರೊಂದಿಗೆ ಅವರ ಕಲಿಕೆಗೂ ಪೂರಕವಾಗು ತ್ತದೆ. ಅವರ ಪೌರಾಣಿಕ ಜ್ಞಾನವನ್ನು ವರ್ಧಿಸುತ್ತದೆ. ಹಾಗೂ ಭಾಷಾಶುದ್ಧಿಗೆ ಕಾರಣವಾಗುತ್ತದೆ ಎಂದು ಯಕ್ಷಶಿಕ್ಷಣ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಕೆ. ರಘುಪತಿ ಭಟ್ ಹೇಳಿದ್ದಾರೆ.
ಯಕ್ಷ ಶಿಕ್ಷಣ ಟ್ರಸ್ಟ್ ವತಿಯಿಂದ ಬ್ರಹ್ಮಾವರದಲ್ಲಿ ಆಯೋಜಿಸಲಾಗಿದ್ದ ಕಿಶೋರ ಯಕ್ಷಗಾನ ಸಂಭ್ರಮ- 2023ರಲ್ಲಿ ಬುಧವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು. ಯಕ್ಷಗಾನದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಪರೀಕ್ಷಾ ಫಲಿತಾಂಶದಲ್ಲಿ ಪ್ರಗತಿ ಸಾಧಿಸಿರು ವುದನ್ನು ನಾವು ಕಂಡಿದ್ದೇವೆ ಎಂದರು.
ಯಕ್ಷ ಶಿಕ್ಷಣ ಟ್ರಸ್ಟ್ ಈ ವರ್ಷ ಉಡುಪಿ, ಕಾಪು, ಕುಂದಾಪುರ ವಿಧಾನಸಭಾ ವ್ಯಾಪ್ತಿಯ 69 ಶಾಲೆಗಳ 70 ಪ್ರದರ್ಶನ ಗಳನ್ನು ಜಿಲ್ಲೆಯ ಆರು ಕಡೆಗಳಲ್ಲಿ ಆಯೋಜಿಸಿದೆ. ನವೆಂಬರ್ 30ರಂದು ಉದ್ಘಾಟನೆಗೊಂಡ ಬ್ರಹ್ಮಾವರದ ಪ್ರದರ್ಶನ ನಿನ್ನೆ ಸಂಪನ್ನಗೊಂಡಿತು.
ಪ್ರದರ್ಶನ ಸಂಘಟನಾ ಸಮಿತಿ ಬ್ರಹ್ಮಾವರದ ಸಹಯೋಗದಲ್ಲಿ ಒಂದು ವಾರ 15 ಪ್ರದರ್ಶನಗಳಲ್ಲಿ ಸುಮಾರು ಬಾಲಕಿ ಯರು ಸೇರಿದಂತೆ 500 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸಮಾರಂಭದಲ್ಲಿ ಸುಗ್ಗಿ ಸುಧಾಕರ ಶೆಟ್ಟಿ, ಎಂ.ಗಂಗಾಧರರಾವ್, ಎಸ್. ವಿ.ಭಟ್, ಉದಯಕುಮಾರ್ ಶೆಟ್ಟಿ, ಬೈಕಾಡಿ ಸುಪ್ರಸಾದ ಶೆಟ್ಟಿ, ಆರೂರು ತಿಮ್ಮಪ್ಪ ಶೆಟ್ಟಿ, ಭಾಸ್ಕರ ರೈ, ಚಂದ್ರಶೇಖರ ಶೆಟ್ಟಿ, ಮೈರ್ಮಾಡಿ ಸುಧಾಕರ ಶೆಟ್ಟಿ, ವೀಣಾ ನಾಯ್ಕ್ ಉಪಸ್ಥಿತರಿದ್ದರು.
ಸಂಘಟನಾ ಸಮಿತಿಯ ಪದಾಧಿಕಾರಿಗಳಾದ ಸುಧೀರ್‌ಕುಮಾರ್ ಶೆಟ್ಟಿ, ರಾಜೀವ ಕುಲಾಲ್, ಸಚಿನ್ ಪೂಜಾರಿ ಇವರನ್ನು ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ವೇಷಭೂಷಣ ಒದಗಿಸಿದ ಪ್ರಸಾಧನತಜ್ಞರಾದ ಕೃಷ್ಣಸ್ವಾಮಿ ಜೋಶಿ ಮತ್ತು ಬಾಲಕೃಷ್ಣ ನಾಯಕ್ ಇವರನ್ನು ಗೌರವಿಸಲಾಯಿತು. ಭಾಗವಹಿಸಿದ ಶಾಲೆಗಳ ಮುಖ್ಯಸ್ಥರಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು.
ವಿದ್ಯಾರ್ಥಿನಿಯರಾದ ತನಿಷ್ಕಾ ಮತ್ತು ಸಂಚಿತಾ ತಮ್ಮ ಅನುಭವವನ್ನು ಹಂಚಿಕೊಂಡರು. ಯಕ್ಷಶಿಕ್ಷಣ ಟ್ರಸ್ಟ್‌ನ ಕಾರ್ಯ ದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕಮಾತುಗಳನ್ನಾಡಿ ಅಭಿಯಾನದ ಪ್ರಯೋಜನವನ್ನು ವಿವರಿಸಿದರು. ಬಿರ್ತಿ ರಾಜೇಶ್ ಶೆಟ್ಟಿ ಸ್ವಾಗತಿಸಿ ರಾಜೀವ ಕುಲಾಲ್ ವಂದಿಸಿದರು.ಗಣೇಶ್ ಬ್ರಹ್ಮಾವರ ಕಾರ್ಯಕ್ರಮ ನಿರೂಪಿಸಿದರು.







