ಟರ್ಕಿಯ ರಂಗಕಲೆಗಳ ತಜ್ಞರಿಂದ ಆರ್‌ಆರ್‌ಸಿಗೆ ಭೇಟಿ

ಉಡುಪಿ, ಡಿ.8: ಟರ್ಕಿ ದೇಶದ ಏಜ್ ವಿಶ್ವವಿದ್ಯಾಲಯದ ರಂಗಕಲೆಗಳ ತಜ್ಞರಾದ ಡಾ. ಗುರ್ಬಜ್ ಅಕ್ತಾಸ್ ಅವರು ಉಡುಪಿಯ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ ಹಾಗೂ ಇಂದ್ರಾಳಿಯಲ್ಲಿರುವ ಯಕ್ಷಗಾನ ಕೇಂದ್ರಗಳಿಗೆ ಭೇಟಿ ನೀಡಿದರು.
ಡಾ.ಅಕ್ತಾಸ್ ಅವರು ಆರ್‌ಆರ್‌ಸಿಯ ಗ್ರಂಥಾಲಯ, ಪ್ರಾಚ್ಯವಸ್ತು ಸಂಗ್ರಹಾಲಯ, ದಾಖಲೀಕರಣಗಳನ್ನು ವೀಕ್ಷಿಸಿ ಕೇಂದ್ರದ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಣಿಪಾಲ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಪಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸಾಯನ್ಸ್‌ನ ನಿರ್ದೇಶಕರಾದ ಪ್ರೊ. ವರದೇಶ್ ಹಿರೇಗಂಗೆ ಅವರೊಂದಿಗಿದ್ದರು. ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಅವರು ಮಾಹಿತಿಗಳನ್ನು ನೀಡಿದರು.
Next Story





