‘ತ್ವಕ್‌ಶುದ್ಧಿ’ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಉದ್ಘಾಟನೆ

ಮಣಿಪಾಲ : ಮಣಿಪಾಲದ ಮುನಿಯಾಲು ಆಯುರ್ವೇದ ಆಸ್ಪತ್ರೆ ಮತ್ತು ಕಾಲೇಜಿನಲ್ಲಿ ಚರ್ಮದ ಖಾಯಿಲೆಗಳು ಮತ್ತು ಸೌಂದರ್ಯ ಚಿಕಿತ್ಸೆಗಳ ಕುರಿತ ತ್ವಕ್‌ಶುದ್ಧಿ-2023 ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವು ಸಂಸ್ಥೆಯ ಬುದ್ಧಾಯುರ್ವೇದ ಆಡಿಟೋರಿಯಂನಲ್ಲಿ ಶನಿವಾರ ನಡೆಯಿತು.
ಮಣಿಪಾಲ ಕೆಎಂಸಿಯ ಚರ್ಮರೋಗ ವಿಭಾಗದ ಮುಖ್ಯಸ್ಥ ಡಾ. ರಾಘವೇಂದ್ರ ರಾವ್ ಉದ್ಘಾಟಿಸಿದರು. ಕಾಸರಗೋಡಿನ ಇನ್‌ಸ್ಟಿಟ್ಯೂಟ್ ಆಫ್ ಎಪ್ಲಾಯಡ್ ಡರ್ಮಟಾಲಜಿ ವಿಭಾಗದ ಮುಖ್ಯ ಸಲಹೆಗಾರ ಡಾ.ಗುರು ಪ್ರಸಾದ್ ಅಗ್ಗಿತ್ತಾಯ, ಕೊಟ್ಟಕ್ಕಲ್‌ನ ವಿಪಿಎಸ್‌ವಿ ಆಯುರ್ವೇದ ಕಾಲೇಜಿನ ಸಹಪ್ರಾಧ್ಯಾಪಕ ಡಾ.ಗೋಪಿಕೃಷ್ಣ ಎಸ್., ಮುನಿಯಾಲ್ ಗ್ರೂಪ್ ಅಫ್ ಕಾಲೇಜಿನ ನಿರ್ದೇಶಕ ಡಾ.ಶ್ರದ್ಧಾ ಶೆಟ್ಟಿ ಉಪಸ್ಥಿತರಿದ್ದರು.
ಕೋರ್ ಕಮಿಟಿ ಸದಸ್ಯ ಡಾ.ನಿವೇದಿತಾ ಹೆಬ್ಬಾರ್ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಸತ್ಯನಾರಾಯಣ ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಅರ್ಚನಾ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು. ನಂತರದಲ್ಲಿ ನಡೆದ ವೈಜ್ಞಾನಿಕ ಗೋಷ್ಠಿಯಲ್ಲಿ ತಜ್ಞ ವೈದ್ಯರಾದ ಡಾ.ರಾಘವೇಂದ್ರ ರಾವ್, ಡಾ.ಗುರುಪ್ರಸಾದ್ ಅಗ್ಗಿತ್ತಾಯ, ಡಾ.ಗೋಪಿಕೃಷ್ಣ ಎಸ್ ಚರ್ಮರೋಗಗಳ ಬಗ್ಗೆ ವಿಚಾರ ಮಂಡಿಸಿದರು.
ಮಧ್ಯಾಹ್ನ ನಂತರದ ಗೋಷ್ಠಿಯಲ್ಲಿ ಕಿನ್ನಿಗೋಳಿ ಆಯುರ್ ರಶ್ಮಿ ಕ್ಲಿನಿಕ್‌ನ ಮುಖ್ಯ ಸಲಹೆಗಾರರಾದ ಡಾ.ರಶ್ಮಿ ಸುವರ್ಣ ಸೋಪ್ ತಯಾರಿಕೆ, ಟ್ರೈಕಾಲಜಿ ಉಪಕರಣಗಳ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ಮುನಿಯಾಲು ಆಯುರ್ವೇದ ಕಾಲೇಜಿನ ರಸಶಾಸ್ತ್ರ ಮತ್ತು ಭೈಷಜ್ಯ ಕಲ್ಪನಾ ವಿಭಾಗದ ಉಪನ್ಯಾಸಕ ಡಾ.ವತ್ಸಲಾ ನಾಯಕ್ ಮತ್ತು ಸಂಶೋಧನಾ ವಿಭಾಗದ ಡಾ.ಅಕ್ಷತಾ, ಅಶ್ವಿತಾ ಸೌಂದರ್ಯವರ್ಧಕಗಳ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ದೇಶದಾದ್ಯಂತದ 27 ಆಯುರ್ವೇದ ಕಾಲೇಜಿನ 230ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿ, 140ಕ್ಕೂ ಹೆಚ್ಚು ವೈಜ್ಞಾನಿಕ ಪ್ರಂಬಂಧ ಮಂಡನೆ ಮಾಡಿದರು.
ಸಮಾರೋಪ: ಸಮಾರಂಭದಲ್ಲಿ ಅತ್ಯುತ್ತಮ ಪ್ರಂಬಂಧ ಮಂಡನೆ ಮತ್ತು ಭಿತ್ತಿಪತ್ರ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ರಸಶಾಸ್ತ್ರ ಮತುತಿ ಭೈಷಜ್ಯ ಕಲ್ಪನಾ ವಿಭಾಗದ ಪ್ರಾಧ್ಯಾಪಕ ಡಾ.ಜೆ.ದಿನೇಶ್ ನಾಯಕ್ ಅವರ ‘ರಸಾರ್ಣವ’ ಪುಸ್ತಕ ಬಿಡುಗಡೆ ಮಾಡಲಾಯಿತು. ಡಾ.ಮಾಧವಿ ಕಾರ್ಯಕ್ರಮವನ್ನು ನಿರ್ವಹಿಸಿ, ಡಾ.ರವಿಶಂಕರ್ ಶೆಣೈ ವಂದಿಸಿದರು.







