ಟೆಂಪೋ ಢಿಕ್ಕಿ: ಪಾದಚಾರಿ ಮಹಿಳೆ ಮೃತ್ಯು

ಕುಂದಾಪುರ: ಟೆಂಪೊ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟಲು ನಿಂತಿದ್ದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಡಿ.9ರಂದು ರಾತ್ರಿ ವೇಳೆ ಕುಂದಾಪುರ ಸರಕಾರಿ ಬಸ್ಸು ನಿಲ್ದಾಣದ ಸಮೀಪ ರಾ.ಹೆ.66ರಲ್ಲಿ ನಡೆದಿದೆ.
ಮೃತರನ್ನು ಮಲ್ಲಮ್ಮ ಎಂದು ಗುರುತಿಸಲಾಗಿದೆ. ಟೆಂಪೊದಲ್ಲಿದ್ದ ಆಕಾಂಕ್ಷ ಹಾಗೂ ದಕ್ಷಾ ಮತ್ತು ಟೆಂಪೊ ಚಾಲಕ ಪ್ರಸನ್ನ ಎಂಬವರು ಗಾಯಗೊಂಡಿದ್ದಾರೆ. ರಸ್ತೆ ದಾಟಲು ನಿಂತಿದ್ದ ಮಲ್ಲಮ್ಮಗೆ, ಬೈಂದೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಟೆಂಪೋ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಮಲ್ಲಮ್ಮ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಇವರು ಮೃತಪಟ್ಟರೆಂದು ತಿಳಿದು ಬಂದಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





