ರಾಜ್ಯ ಶಾರ್ಟ್‌ಕೋರ್ಸ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್ : ಬಸವನಗುಡಿ ಅಕ್ವಟಿಕ್ ಸೆಂಟರ್‌ಗೆ ಸಮಗ್ರ ಪ್ರಶಸ್ತಿ

ಉಡುಪಿ, ಡಿ.10: ಕರ್ನಾಟಕ ರಾಜ್ಯ ಸ್ವಿಮ್ಮಿಂಗ್ ಅಸೋಸಿಯೇಶನ್ ವತಿಯಿಂದ ಅಜ್ಜರಕಾಡು ಜಿಲ್ಲಾ ಈಜುಕೊಳದಲ್ಲಿ ನಾಲ್ಕು ದಿನಗಳ ಕಾಲ ಹಮ್ಮಿಕೊಳ್ಳಲಾದ 23ನೇ ರಾಜ್ಯ ಶಾರ್ಟ್ ಕೋರ್ಸ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್‌ನಲ್ಲಿ ಬೆಂಗಳೂರು ಬಸವನಗುಡಿ ಅಕ್ವಟಿಕ್ ಸೆಂಟರ್ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದೆ.
ಅಕ್ವಟಿಕ್ ಸೆಂಟರ್ 1007 ಅಂಕಗಳೊಂದಿಗೆ ವಿನ್ನರ್ಸ್ ಆಗಿ ಮೂಡಿಬಂದರೆ ಡಾಲ್ಫಿನ್ ಅಕ್ವಟಿಕ್ಸ್ 360 ಅಂಕಗಳೊಂದಿಗೆ ರನ್ನರ್ಸ್ ಪ್ರಶಸ್ತಿ ಪಡೆದುಕೊಂಡಿದೆ. ಗ್ರೂಪ್-3ರ ಬಾಲಕರ ವಿಭಾಗದಲ್ಲಿ ಅಕ್ವಟಿಕ್ ಸೆಂಟರ್‌ನ ನಿಖಿಲ್ ತೇಜ್ ರೆಡ್ಡಿ(36 ಅಂಕ), ಬೆಂಗಳೂರು ಸ್ವಿಮ್ಮಿಂಗ್ ಅಸೋಸಿಯೇಶನ್‌ನ ರೋಹಿತ್ ಅರುಣ್ ಕುಮಾರ್(36), ಬಾಲಕಿಯರ ವಿಭಾಗದಲ್ಲಿ ಡಿಕೆವಿಯ ಸುಮನವಿ ವಿ.(35) ವೈಯಕ್ತಿಕ ಚಾಂಪಿಯನ್ ಪಡೆದುಕೊಂಡರು.
ಅದೇ ರೀತಿ ಗ್ರೂಪ್ -2ರ ಬಾಲಕರ ವಿಭಾಗದಲ್ಲಿ ಡಾಲ್ಫಿನ್‌ನ ಸಾತ್ವಿಕ್ ನಾಯಕ್ ಸುಜೀರ್(38), ಪಿಎಂಎಸ್‌ಸಿಯ ಶರಣ್ ಎಸ್.(38) ಮತ್ತು ಬಾಲಕಿಯರ ವಿಭಾಗದಲ್ಲಿ ಪಿಎಂಎಸ್‌ಸಿಯ ತಿಸ್ಯಾ ಸೋನಾರ್(37) ಹಾಗೂ ಗ್ರೂಪ್- 1ರ ಬಾಲಕರ ವಿಭಾಗದಲ್ಲಿ ಡಾಲ್ಫಿನ್‌ನ ಅಲೈಸ್ಟರ್ ಸ್ಯಾಮುವೆಲ್ ರೆಗೋ(40) ಹಾಗೂ ಬಾಲಕಿಯರ ವಿಭಾಗದಲ್ಲಿ ಡಾಲ್ಫಿನ್‌ನ ನೈಶಾ ಶೆಟ್ಟಿ ವೈಯಕ್ತಿಕ ಚಾಂಪಿಯನ್ ತನ್ನದಾಗಿಸಿದರು. ಶರಣ್ ಎಸ್., ಅಲೈಸ್ಟರ್ ಸ್ಯಾಮುವೆಲ್ ರೆಗೊ, ನೈಶಾ ಶೆಟ್ಟಿ ಸೇರಿದಂತೆ ಒಟ್ಟು ಏಳು ಕೂಡ ದಾಖಲೆಗಳು ನಿರ್ಮಾಣಗೊಂಡವು.







