ಮೂಡಬೆಟ್ಟು: ಅಂಬೇಡ್ಕರ್ ಪರಿನಿಬ್ಬಾಣ ದಿನಾಚರಣೆ

ಉಡುಪಿ, ಡಿ.11: ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಮೂಡಬೆಟ್ಟು ಶಾಖೆ ಮತ್ತು ಅಂಬೇಡ್ಕರ್ ಯುವಕ ಮಂಡಲ ಹಾಗೂ ಯುವತಿ ಮಂಡಲದ ಸಹಯೋಗದೊಂದಿಗೆ ಅಂಬೇಡ್ಕರ್ ಅವರ 67ನೇ ಪರಿನಿಬ್ಬಾಣ ದಿನವನ್ನು ಚೇಂಡ್ಕಲದ ಅಂಬೇಡ್ಕರ್ ಯುವಕ ಮಂಡಲದ ಸಭಾಭವನದಲ್ಲಿ ಆಚರಿಸಲಾಯಿತು.
ದಸಂಸ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ಟರ್, ಮೂಡುಬೆಟ್ಟು ಶಾಖೆಯ ಪ್ರಧಾನ ಸಂಚಾಲಕ ಶಿವಾನಂದ ಮೂಡಬೆಟ್ಟು, ಮುಖಂಡರಾದ ಸತೀಶ್ ಚೇಂಡ್ಕಳ, ಸುಧಾಕರ ಚೇಂಡ್ಕಳ, ಮೋಹನ್ ಚೇಂಡ್ಕಳ, ಜಗನ್ನಾಥ ಚೇಂಡ್ಕಳ, ವಿನಯ ಚೇಂಡ್ಕಳ, ಯುವತಿ ಮಂಡಲದ ಗೌರವಾಧ್ಯಕ್ಷೆ ಅಕ್ಕಣಿ ಟೀಚರ್, ಅಧ್ಯಕ್ಷೆ ಜಾನಕಿ ಶಂಕರ್‌ದಾಸ್ ಮೊದಲಾದವರು ಉಪಸ್ಥಿತರಿದ್ದರು. ಸುರೇಂದ್ರ ಕೋಟಿಯಾನ್ ಕಾರ್ಯಕ್ರಮ ನಿರೂಪಿಸಿದರು.
Next Story





