Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಕಾರ್ಟೂನ್ ಹಬ್ಬ: ಕಾರ್ಟೂನು ಸ್ಪರ್ಧೆಯ...

ಕಾರ್ಟೂನ್ ಹಬ್ಬ: ಕಾರ್ಟೂನು ಸ್ಪರ್ಧೆಯ ವಿಜೇತರು

ವಾರ್ತಾಭಾರತಿವಾರ್ತಾಭಾರತಿ11 Dec 2023 7:22 PM IST
share
ಕಾರ್ಟೂನ್ ಹಬ್ಬ: ಕಾರ್ಟೂನು ಸ್ಪರ್ಧೆಯ ವಿಜೇತರು

ಕುಂದಾಪುರ, ಡಿ.11: ಕುಂದಾಪುರದ ಕಲಾಮಂದಿರದಲ್ಲಿ ಕಾರ್ಟೂನು ಹಬ್ಬ ಬಳಗ ಕುಂದಾಪುರ ಇವರ ನೇತೃತ್ವದಲ್ಲಿ ನಡೆಯುತ್ತಿರುವ 10ನೇ ವರ್ಷದ ಕಾರ್ಟೂನು ಹಬ್ಬದ ಭಾಗವಾಗಿ ಮೊದಲ ದಿನ ನಡೆದ ಕಾರ್ಟೂನು ಸ್ಪರ್ಧೆಯಲ್ಲಿ ಉಡುಪಿ- ದ.ಕ ಜಿಲ್ಲೆಗಳ ಸುಮಾರು 400ಕ್ಕೂ ಅಧಿಕ ಶಾಲಾ- ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದು ಇದರಲ್ಲಿ ವಿಜೇತರಾದವರ ವಿವರ ಹೀಗಿದೆ.

4ರಿಂದ 7ನೇಯ ತರಗತಿ ವಿಭಾಗ: ಪ್ರಥಮ: ವಿನೇಶ್ ಆಚಾರ್ಯ (ಎಸ್.ಆರ್.ಪಬ್ಲಿಕ್ ಸ್ಕೂಲ್ ಹೆಬ್ರಿ), ದ್ವೀತಿಯ: ಅನ್ವಿತ್ ಆರ್. ಶೆಟ್ಟಿಗಾರ್ (ಸೈಂಟ್ ಮೇರಿಸ್ ಇಂಗ್ಲಿಷ್ ಮೀಡಿಯಂ ಶಾಲೆ ಉಡುಪಿ). ತೃತೀಯ: ಅದಿತಿ (ವಾಸುದೇವ ಕೃಪಾ ವಿದ್ಯಾಮಂದಿರ ಶಾಲೆ ಬೈಲೂರು. ಉಡುಪಿ) ಪಡೆದಿದ್ದಾರೆ.

ಸಮಾಧಾನಕರ ಬಹುಮಾನ: ಯಕ್ಷತ್ ಶೆಟ್ಟಿ (ವಿಶ್ವ ವಿನಾಯಕ ಶಾಲೆ, ತೆಕ್ಕಟ್ಟೆ), ಸಂಜಿತ್ ಎಂ. ದೇವಾಡಿಗ (ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಮಾದರಿ ಶಾಲೆ, ಗಂಗೊಳ್ಳಿ), ನಿಹಾರ್ ಜೆ.ಎಸ್ (ಜಿ.ಎಂ ವಿದ್ಯಾನಿಕೇತನ ಶಾಲೆ, ಬ್ರಹ್ಮಾವರ), ಅಕ್ಷರ (ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಸ್ಕುತ್ತೂರು), ನಿದಿಶ್ (ಜಿ.ಎಂ.ವಿದ್ಯಾನಿಕೇತನ ಸ್ಕೂಲ್ ಬ್ರಹ್ಮಾವರ) ಪಡೆದಿದ್ದಾರೆ.

8ರಿಂದ 10ರ ತರಗತಿ: ಪ್ರಥಮ: ಶರಧಿ (ವಿವೇಕ ಇಂಗ್ಲಿಷ್ ಮೀಡಿಯಂ ಶಾಲೆ, ಕೋಟ), ದ್ವಿತೀಯ: ಅನಘಾ ಮಧುಕರ್ (ಲಿಟಲ್ ರಾಕ್ ಬ್ರಹ್ಮಾವರ), ತೃತೀಯ: ಸೋಹನ್ ಆಚಾರ್ಯ ( ಲಿಟ್ಲ್‌ರಾಕ್ ಬ್ರಹ್ಮಾವರ). ಸಮಾಧಾನಕರ ಬಹುಮಾನ: ರಕ್ಷಣ್ (ವಿಜಯ ಮಕ್ಕಳ ಕೂಟ ಶಾಲೆ, ಆತ್ರಾಡಿ ), ನಿಖಿತ್ (ಸಂದೀಪನ್ ಶಾಲೆ ನಾಗೂರು ), ಸಿಂಚನಾ ಮೆಂಡನ್ ( ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್, ಶಿರೂರು.), ಪ್ರೀತಮ್ ಸಂತೋಷ್ ಖಾರ್ವಿ (ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುಜ್ಜಾಡಿ), ನಿರ್ಭಯ್ ಯು. ಶೆಟ್ಟಿ(ಗುರುಕುಲ ಪಬ್ಲಿಕ್ ಸ್ಕೂಲ್, ವಕ್ವಾಡಿ) ಪಡೆದಿದ್ದಾರೆ.

ಪಿಯುಸಿ ಮತ್ತು ಮೇಲ್ಪಟ್ಟ ತರಗತಿ: ಪ್ರಥಮ: ರೋಹಿತ್ ಆಚಾರ್ಯ (ಕರ್ನಾಟಕ ಸ್ಟೇಟ್ ಓಪನ್ ಯೂನಿವರ್ಸಿಟಿ), ದ್ವಿತೀಯ: ಸುಹಾನ್ ಎಸ್. ಶೆಟ್ಟಿ (ಜ್ಞಾನಸುಧಾ ಪಿಯು ಕಾಲೇಜು, ಉಡುಪಿ). ತೃತೀಯ: ಸ್ವಸ್ಥಿಕ್ ದೇವಾಡಿಗ (ಬಿಬಿ ಹೆಗ್ಡೆ ಕಾಲೇಜು, ಕುಂದಾಪುರ).

ಸಮಾಧಾನಕರ ಬಹುಮಾನ: ಗಗನ್ ಎಸ್. ಸುವರ್ಣ(ಪಿಪಿಸಿ ಉಡುಪಿ), ಅಮಿತ್ ರಾಜ್(ಮಹಾಲಸಾ ಕಾಲೇಜ್ ಆಫ್ ವಿಜುವಲ್ ಆರ್ಟ್), ಪವಿತ್ರಾ ಜಿ. ಮರಾಠಿ (ಎಸ್.ಕೆ.ವಿ.ಎಮ್.ಎಸ್ ಸರಕಾರಿ ಕಾಲೇಜು, ಕೋಟೇಶ್ವರ), ಸ್ಪೂರ್ತಿ ಜಿ. (ಮೈಟ್, ಮೂಡಬಿದಿರೆ) ಅದ್ವೈತ್ ಆಚಾರ್ಯ (ಎಸ್‌ಎಂವಿಐಟಿ ಬಂಟಕಲ್) ಪಡೆದಿದ್ದಾರೆ.

ಈ ಸಂದರ್ಭದಲ್ಲಿ ಉದಯೋನ್ಮುಖ ಮಹಿಳಾ ಕಾರ್ಟೂನಿಷ್ಠರನ್ನು ಬೆಂಬಲಿಸುವ ನಿಟ್ಟಿನಲ್ಲಿ 4 ವಿಶೇಷ ಬಹುಮಾನಗಳನ್ನು ನೀಡಲಾಗಿದ್ದು ಅವುಗಳನ್ನು ವಿವಿಧ ಪ್ರೌಢಶಾಲಾ ವಿದ್ಯಾರ್ಥಿನಿಯರಾದ ನಮಿತಾ ( ಸೈಂಟ್ ಮೇರೀಸ್ ಹೈಸ್ಕೂಲ್ ), ಯಾಘ್ನಿಕಾ ಎನ್ (ಸ್ಮಾರ್ಟ್ ಇಂಡಿಯನ್ ಸ್ಕೂಲ್, ಉದ್ಯಾವರ ), ದೃಷ್ಟಿ ಎಸ್ (ಲಿಟ್ಲ್‌ರಾಕ್, ಬ್ರಹ್ಮಾವರ ), ಸಾನ್ವಿ ಪವನ್ ( ಲಿಟ್ಲ್‌ರಾಕ್ ಬ್ರಹ್ಮಾವರ) ಪಡೆದಿದ್ದಾರೆ.

ಡಿ.12ರ ಮಂಗಳವಾರದವರೆಗೆ ಕುಂದಾಪುರ ತಾಲೂಕಿನ ವ್ಯಂಗ್ಯಚಿತ್ರಕಾರ ರಾದ ಪಂಜು ಗಂಗೊಳ್ಳಿ, ಸತೀಶ್ ಆಚಾರ್ಯ, ಚಂದ್ರಶೇಖರ ಶೆಟ್ಟಿ, ರಾಮಕೃಷ್ಣ ಹೇರ್ಳೆ, ಕೇಶವ ಸಸಿಹಿತ್ಲು, ಜಿ.ಬಿ ಕಲೈಕಾರ್, ಸಂತೋಷ್ ಸಸಿಹಿತ್ಲು, ಚಂದ್ರ ಗಂಗೊಳ್ಳಿ, ಜಯರಾಂ ಉಡುಪ ಮುಂತಾದವರ ಆಯ್ದ, ಪ್ರಕಟಿತ ವ್ಯಂಗ್ಯಚಿತ್ರಗಳ ಪ್ರದರ್ಶನ ಹಾಗೂ ಖ್ಯಾತ ವ್ಯಂಗ್ಯಚಿತ್ರಕಾರರಿಂದ ಆಸಕ್ತ ಸಾರ್ವಜನಿಕರ ವ್ಯಂಗ್ಯಭಾವಚಿತ್ರ ರಚನೆ ನಡೆಯಲಿದೆ.

ಡಿ.11 ಮತ್ತು 12ರಂದು ಕುಂದಾಪುರದ ಪರಿಸರದ ವಿವಿಧ ಶಾಲೆಗಳ ಆಯ್ದ ಕಾರ್ಟೂನಾಸಕ್ತ ವಿದ್ಯಾರ್ಥಿಗಳಿಗೆ ಖ್ಯಾತ ವ್ಯಂಗ್ಯಚಿತ್ರಕಾರರಿಂದ ವ್ಯಂಗ್ಯಚಿತ್ರ ರಚನಾ ತರಬೇತಿ ಕಾರ್ಯಕ್ರಮ ನಡೆಯಲಿದೆ ಎಂದು ‘ಕಾರ್ಟೂನು ಹಬ್ಬ ಬಳಗ’ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X