ಯುವಕ ನಾಪತ್ತೆ

ಗಂಗೊಳ್ಳಿ, ಡಿ.11: ಸ್ವಾಮೀಜಿ ಆಗುವುದಾಗಿ ಹೇಳುತ್ತಿದ್ದ ಯುವಕನೋರ್ವ ಮನೆಯಿಂದ ನಾಪತ್ತೆಯಾಗಿರುವ ಘಟನೆ ಆನಗೋಡು ಎಂಬಲ್ಲಿ ನಡೆದಿದೆ.
ಆನಗೋಡು ನಿವಾಸಿ ಬಾಬು ಎಂಬವರ ಮಗ ಗುರುರಾಜ(25) ಎಂಬಾತ ಕಳೆದ ಒಂದು ತಿಂಗಳಿಂದ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದರು. ತಂದೆ ಆತನಲ್ಲಿ ವಿಚಾರಿಸಿದಾಗ ನನಗೆ ಕೆಲಸಕ್ಕೆ ಹೋಗಲು ಇಷ್ಟವಿಲ್ಲ ನಾನು ಸ್ವಾಮೀಜಿ ಆಗುತ್ತೇನೆ ಎಂದು ಹೇಳಿದ್ದನು.
ಡಿ.7ರಂದು ಬೆಳಗ್ಗೆ ತ್ರಾಸಿ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದ ಗುರುರಾಜ್ ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾನೆ ಎಂದು ತಂದೆ ಬಾಬು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





