ಬ್ಯಾಡ್ಮಿಂಟನ್ ಲೀಗ್: ಕೋಸ್ಟಲ್ ಸ್ಮ್ಯಾಶರ್ಸ್ ಚಾಂಪಿಯನ್

ಉಡುಪಿ, ಡಿ.13: ಉಡುಪಿಯ ಅಜ್ಜರಕಾಡು ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣದಲ್ಲಿ ರವಿವಾರ ನಡೆದ ಎಮಾರ್ರ್ಲ್ ಸ್ಪೋರ್ಟ್ಸ್ ಬ್ಯಾಡ್ಮಿಂಟನ್ ಲೀಗ್- 2023ರಲ್ಲಿ ಕೋಸ್ಟಲ್ ಸ್ಮ್ಯಾಶರ್ಸ್ ತಂಡ ಚಾಂಪಿಯನ್ ಆಗಿ ಮೂಡಿ ಬಂದಿದೆ.
ಬಿ.ಸಿ.ರೋಡ್ ಉದ್ಯಮಿ ಮುಹಮ್ಮದ್ ಹನೀಫ್ ಮಾಲಕತ್ವದ ಕೋಸ್ಟಲ್ ಸ್ಮ್ಯಾಶರ್ಸ್ ತಂಡವನ್ನು ಮುಹಮ್ಮದ್ ಹನೀಫ್, ಮ್ಯಾನೇಜರ್ ನೌಸೀರ್ ಸಹಿತ ಮುಹಮ್ಮದ್ ತ್ವೈಫ್, ಶೃಜನ್, ಅರವಿಂದ್ ಭಟ್, ಅಲ್ವಿನ್ ಪಿಂಟೊ, ತೇಜಶ್ವಿ, ಶಶಾಂಕ್, ರೋಗರ್ ಪಿಂಟೊ, ಕೇಶವ್ ನಾಯ್ಕ್ ಮತ್ತು ನಾಸಿರ್ ಮುನ್ನಡೆಸಿದರು.
ಲೀಗ್‌ನಲ್ಲಿ 10 ಮಂದಿ ಮಾಲಕತ್ವದ 50 ತಂಡಗಳು ಭಾಗವಹಿಸಿದ್ದು, ಒಟ್ಟು 110 ಮಂದಿ ಆಟಗಾರರು ಪಾಲ್ಗೊಂಡಿದ್ದರು.
Next Story





