ಉಡುಪಿ ಪ್ರಾದೇಶಿಕ ಕಚೇರಿ ತಂಡಕ್ಕೆ ಎಸ್‌ಬಿಐ ಡಿಜಿಎಂ ಟ್ರೋಫಿ

ಉಡುಪಿ, ಡಿ.13: ಮಂಗಳೂರಿನ ಸಹ್ಯಾದ್ರಿ ಕಾಲೇಜು ಕ್ರೀಡಾಂಗಣದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಂಗಳೂರು ಆಡಳಿತ ಕಚೇರಿ -6 ವತಿಯಿಂದ ಪ್ರಾದೇಶಿಕ ಕಚೇರಿಗಳ ಮಧ್ಯೆ ನಡೆದ ಡೆಪ್ಯುಟಿ ಜನರಲ್ ಮ್ಯಾನೇಜರ್ ಕಪ್ ಕ್ರಿಕೆಟ್ ಪಂದ್ಯಾಕೂಟದಲ್ಲಿ ಉಡುಪಿ ಪ್ರಾದೇಶಿಕ ಕಚೇರಿ ತಂಡ ಪ್ರಶಸ್ತಿ ಗೆದ್ದುಕೊಂಡಿದೆ.
ಪಂದ್ಯಾಕೂಟದಲ್ಲಿ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಮಂಗಳೂರು, ಮಡಿಕೇರಿ, ಉಡುಪಿಯ ಪ್ರಾದೇಶಿಕ ಕಛೇರಿಗಳ ಎಂಟು ತಂಡಗಳು ಭಾಗವಹಿಸಿದ್ದವು. ಪಂದ್ಯಕೂಟವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಡೆಪ್ಯುಟಿ ಜನರಲ್ ಮ್ಯಾನೇಜರ್ ಜೋಬಿ ಜೋಸ್ ಉಧ್ಘಾಟಿಸಿದರು.
ಲೀಗ್ ಮಾದರಿಯಲ್ಲಿ ನಡೆದ ಪಂದ್ಯಕೂಟದ ಫೈನಲ್ ಪಂದ್ಯದಲ್ಲಿ ದೀಪ ರಾಜ್ ಹೆಗ್ಡೆ ನೇತೃತ್ವದ ಉಡುಪಿ ತಂಡವು ಹಾಸನ ತಂಡವನ್ನು ಸೋಲಿಸಿ ಟ್ರೋಫಿ ಪಡೆದುಕೊಂಡಿದೆ.
Next Story





