ಉಡುಪಿ: ಪೆರಂಪಳ್ಳಿ ವಾರ್ಡಿಗೆ ಉಪಚುನಾವಣೆ; ಕಾಂಗ್ರೆಸ್ ಪಕ್ಷದಿಂದ ಶ್ರುತಿ ನಾಮಪತ್ರ ಸಲ್ಲಿಕೆ

ಉಡುಪಿ, ಡಿ.14: ಉಡುಪಿ ನಗರಸಭೆಯ 13ನೇ ಮೂಡುಪೆರಂಪಳ್ಳಿ ವಾರ್ಡಿನ ಸಾಮಾನ್ಯ ಮಹಿಳಾ ಮೀಸಲಾತಿ ಇರುವ ಉಪಚುನಾವಣೆ ಇದೇ ಡಿ.27ರಂದು ನಡೆಯಲಿದ್ದು, ಈ ಸ್ಥಾನಕ್ಕೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಿಂದ ಶ್ರುತಿ ಅವರು ಇಂದು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಪೆರಂಪಳ್ಳಿ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾದ ಶ್ರುತಿ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಉಡುಪಿ ನಗರಸಭೆಗೆ ತೆರಳಿ ತಮ್ಮ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ರಮೇಶ್ ಕಾಂಚನ್, ಮುಖಂಡರಾದ ಎಂ.ಎ.ಗಫೂರ್, ಕಿಶನ್ ಹೆಗ್ಡೆ ಕೊಳ್ಕೆಬೈಲು, ಮುರಳಿ ಶೆಟ್ಟಿ, ಕುಶಲ್ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಭಾಸ್ಕರ ರಾವ್ ಕಿದಿಯೂರು, ಹಬೀಬ್ ಅಲಿ, ಶಬ್ಬೀರ್ ಅಹ್ಮದ್, ಹರೀಶ್ ಶೆಟ್ಟಿ, ಗೀತಾ ವಾಗ್ಳೆ, ಮಮತಾ ಶೆಟ್ಟಿ, ಅಗ್ನೇಲ್, ರೋಶನ್ ಶೆಟ್ಟಿ, ಜೋಷಿ ಪಿಂಟೋ ಮುಂತಾದವರೊಂದಿಗೆ ಪೆರಂಪಳ್ಳಿ ವಾರ್ಡಿನ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಉಸ್ತುವಾರಿಗಳ ನೇಮಕ: ಪೆರಂಪಳ್ಳಿ ವಾರ್ಡಿನ ಉಪಚುನಾವಣೆಗೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ನಾಯಕರಾದ ರಮೇಶ್ ಪೂಜಾರಿ, ಸತೀಶ್ ಪುತ್ರನ್, ಗಣೇಶ್ ನೆರ್ಗಿ, ಮ್ಯಾಕ್ಸಿಮ್ ಡಿಸೋಜಾ, ನಾರ್ಸಿ ಯಾಕೂಬ್, ಮಾಧವ ಬನ್ನಂಜೆ, ಆನಂದ್ ಪೂಜಾರಿ, ಮಮತಾ ಶೆಟ್ಟಿ ಹಾಗೂ ಡಿಯೋನ್ ಡಿಸೋಜಾ ಉಸ್ತುವಾರಿಗಳಾಗಿ ನೇಮಕ ಗೊಂಡಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸಭೆ: ಪೆರಂಪಳ್ಳಿ ವಾರ್ಡಿನ ಅಭ್ಯರ್ಥಿ ಶ್ರುತಿ ಅವರು ನಾಮಪತ್ರ ಸಲ್ಲಿಸುವ ಮೊದಲು ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಭೇಟಿಯಾಗಿ ಡಿ.27ರಂದು ನಡೆಯುವ ಉಪ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಡಿ.27ರಂದು ಚುನಾವಣೆ: ಪೆರಂಪಳ್ಳಿ ವಾರ್ಡಿಗೆ ನಡೆಯುವ ಚುನಾವಣೆಗಾಗಿ ನಾಮಪತ್ರ ಸಲ್ಲಿಸಲು ಡಿ.15 ಕೊನೆಯ ದಿನವಾಗಿದೆ. 16ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಡಿ.18 ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿರುತ್ತದೆ. ಡಿ.27ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಡಿ.30ರಂದು ಮತಗಳ ಎಣಿಕೆ ನಡೆಯಲಿದೆ
ಮೂಡುಪೆರಂಪಳ್ಳಿ ವಾರ್ಡಿನ ಕಾಂಗ್ರೆಸ್ ಸದಸ್ಯೆಯಾಗಿದ್ದು ಸೆಲಿನಾ ಕರ್ಕಡ ಅನಾರೋಗ್ಯದ ಕಾರಣ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ನಿಧನರಾಗಿದ್ದು, ಹೀಗಾಗಿ ತೆರವಾಗಿರುವ ಈ ಸ್ಥಾನಕ್ಕೆ 27ರಂದು ಉಪಚುನಾವಣೆಯನ್ನು ಆಯೋಗ ಘೋಷಿಸಿದೆ.







