ಪರ್ಕಳದಲ್ಲಿ ಪುತ್ತಿಗೆಶ್ರೀಗಳಿಂದ ಸೌಖ್ಯವನ ಸರ್ಕಲ್ ಉದ್ಘಾಟನೆ

ಉಡುಪಿ, ಡಿ.15: ಪರ್ಕಳದಿಂದ ಹಿರಿಯಡ್ಕದ ಕಡೆ ವಿಸ್ತಾರಗೊಂಡ ರಾಜ ಮಾರ್ಗದ ಪರ್ಕಳ ಹೈಸ್ಕೂಲ್ ಸಮೀಪ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗೆ ಹಾದು ಹೋಗುವ ತ್ರಿಭುಜ ಮಾರ್ಗದ ಮಧ್ಯದಲ್ಲಿ ಭಾವಿ ಪರ್ಯಾಯ ಪುತ್ತಿಗೆ ಮಠ, ವಿವಿಧ ಸಂಘಗಳ ಸಹಯೋಗ ಹಾಗೂ ಸ್ಥಳೀಯರ ಸಹಕಾರದೊಂದಿಗೆ ನಿರ್ಮಿಸಿದ ‘ಶ್ರೀ ಮಂಜುನಾಥ ಸೌಖ್ಯವನ ವೃತ್ತ’ವನ್ನು ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಉದ್ಘಾಟಿಸಿದರು.
ಉಡುಪಿ ಮತ್ತು ಪುತ್ತಿಗೆಗೆ ಮೂಲ ಕೊಂಡಿಯಾಗಿ, ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನಕ್ಕೆ ಬರುವ ಸಾಧಕರಿಗೆ ಗುರುತಿನ ಮೈಲುಗಲ್ಲಾಗಿ ಇದು ಕಾರ್ಯ ನಿರ್ವಹಿಸಲಿ ಎಂದು ಮುಂದಿನ ಜನವರಿ ತಿಂಗಳು ನಾಲ್ಕನೇ ಬಾರಿ ಶ್ರೀಕೃಷ್ಣ ಮಠದ ಸರ್ವಜ್ಞ ಪೀಠವನ್ನು ಅಲಂಕರಿಸಲಿರುವ ಪುತ್ತಿಗೆಶ್ರೀಗಳು ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ಶ್ರೀಗಳನ್ನು ಗಣ್ಯರ ಸಮ್ಮುಖದಲ್ಲಿ ಆತ್ಮೀಯವಾಗಿ ಗೌರವಿಸಲಾಯಿತು. ಗಣೇಶ್‌ರಾಜ್ ಸರಳೇಬೆಟ್ಟು ಪ್ರಸ್ತಾವಿಕ ಮಾತು ಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದಲಿ ಸೌಖ್ಯವನದ ಡಾ.ಗೋಪಾಲ್ ಪೂಜಾರಿ, ಡಾ ಶೋಭಿತ್ ಶೆಟ್ಟಿ, ವ್ಯವಸ್ಥಾಪಕ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.
ಸ್ಥಳೀಯರಾದ ಮೋಹನದಾಸ್ ನಾಯಕ್, ಸಮಾಜಸೇವಕ ನಿತ್ಯಾನಂದ ಒಳಕಾಡು, ಸರಳೇಬೆಟ್ಟು ಬಾಲ ಮಿತ್ರ ಯಕ್ಷಗಾನ ಮಂಡಳಿಯ ಸಂಚಾಲಕ ಕಮಲಾಕ್ಷ ಪ್ರಭು, ಪರ್ಕಳದ ಉದ್ಯಮಿ ಅಬೂಬಕ್ಕರ್ ಸಾಹೇಬ್, ಕರವೇಯ ಪ್ರಭಾಕರ ರಾಜ್ ಪೂಜಾರಿ, ರತ್ನಾಕರ ಮೊಗವೀರ ಹಾವಂಜೆ, ಕುಶಾಲ್ ಅಮೀನ್ ಬೆಂಗ್ರೆ,ಉಪೇಂದ್ರ ನಾಯಕ್, ರಾಘ ವೇಂದ್ರ ನಾಯಕ್, ಕಾಂಗ್ರೆಸ್ ಮುಖಂಡ ಜಯಶೆಟ್ಟಿ ಬನ್ನಂಜೆ, ರಾಜೇಶ್ ಪ್ರಭು ಪರ್ಕ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.







