ವೇಶ್ಯಾವಾಟಿಕೆ ದಂಧೆ ಆರೋಪ: ಮೂವರ ಬಂಧನ

ಕಾರ್ಕಳ, ಡಿ.15: ಕಾರ್ಕಳ ಭುವನೇಂದ್ರ ಕಾಲೇಜ್ ಬಳಿಯ ಮನೆಯೊಂದರಲ್ಲಿ ಡಿ.14ರಂದು ಅಪರಾಹ್ನ ವೇಳೆ ನಡೆಯುತ್ತಿದ್ದ ವೇಶ್ಯಾವಾಟಿಕೆಗೆ ಸಂಬಂಧಿಸಿ ಮೂವರನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.
ಗೋವರ್ಧನ, ಉಪೇಂದ್ರ ನಾಯ್ಕ, ಅವಿನಾಶ, ಉಡುಪಿಯ ದೀಪಾ, ಅಶೋಕ ಹಾಗೂ ಪ್ರವೀಣ ಕುಮಾರ್ ಎಂಬವರು ಅಕ್ರಮವಾಗಿ ಸಾರ್ಜಜನಿಕ ಸ್ಥಳದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು, ಉಪೇಂದ್ರ ನಾಯ್ಕ, ಅವಿನಾಶ ಮತ್ತು ಪ್ರವೀಣ ಕುಮಾರ್ ಎಂಬವರನ್ನು ಬಂಧಿಸಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





