ಬ್ರಹ್ಮಾವರ ಕೋರ್ಟ್ ಆವರಣದಲ್ಲಿ ವ್ಯಕ್ತಿಗೆ ಹಲ್ಲೆ

ಬ್ರಹ್ಮಾವರ, ಡಿ.17: ವ್ಯಕ್ತಿಯೊಬ್ಬರಿಗೆ ಕಾರು ರಿಕ್ಷಾದಲ್ಲಿ ಬಂದ ಆರೋಪಿಗಳು ಬ್ರಹ್ಮಾವರ ನ್ಯಾಯಾಲಯದ ಆವರಣದಲ್ಲಿಯೇ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಚೇರ್ಕಾಡಿಯ ಅಣ್ಣಯ್ಯ(60) ಎಂಬವರು ನೋಟರಿ ದಾಖಲಾತಿಯನ್ನು ಹಾಜರುಪಡಿಸಲು ಬ್ರಹ್ಮಾವರ ತಾಲೂಕು ವಾರಂಬಳ್ಳಿ ಗ್ರಾಮದ ಎ.ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಬರುತ್ತಿದ್ದು, ಈ ವೇಳೆ ಕಾರು ಮತ್ತು ರಿಕ್ಷಾದಲ್ಲಿ ಬಂದ ಆರೋಪಿಗಳಾದ ಅಕ್ಕಯ್ಯ, ಮಹೇಶ, ಮಹೇಂದ್ರ, ಮಮತಾ ಎಂಬವರು ನ್ಯಾಯಾಲಯದ ಆವರಣದಲ್ಲಿ ಅಣ್ಣಯ್ಯ ಅವರನ್ನು ತಡೆದು ಹಲ್ಲೆ ಮಾಡಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





