ವಿವಿಧ ತರಬೇತಿಗಳಿಗೆ ಅರ್ಜಿ ಆಹ್ವಾನ

ಮಣಿಪಾಲ, ಡಿ.18: ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್‌ನಲ್ಲಿ (ಬಿವಿಟಿ) ಮುಂದಿನ ಜ.2ರಿಂದ 10 ದಿನಗಳ ಕಾಲ ಫ್ಯಾಶನ್ ರವಕೆಗಳು ಮತ್ತು ಸೀರೆಗೆ ಕುಚ್ಛು ಕಟ್ಟುವ ಬಗ್ಗೆ ಉಚಿತ ತರಬೇತಿಯನ್ನು ಹಮ್ಮಿ ಕೊಳ್ಳಲಾಗಿದೆ.
ಸ್ವ-ಉದ್ಯೋಗ ಮಾಡಲು ಆಸಕ್ತಿ ಇರುವ 18ರಿಂದ 45 ವರ್ಷದ ಒಳಗಿನ ಮಹಿಳೆಯರು/ಯುವತಿಯರು ಈ ತರಬೇತಿಯ ಸದುಪಯೋಗವನ್ನು ಪಡೆದುಕೊಳ್ಳಬಹುದು. ಹೊಲಿಗೆಯಲ್ಲಿ ಪ್ರಾಥಮಿಕ ಅನುಭವ ಇದ್ದವರಿಗೆ ಆದ್ಯತೆ. ತರಬೇತಿಯ ಸಮಯದಲ್ಲಿ ಅಭ್ಯರ್ಥಿಗಳಿಗೆ ಉಚಿತ ಊಟದ ವ್ಯವಸ್ಥೆ ಇರುತ್ತದೆ.
ಅಸಕ್ತ ಅಭ್ಯರ್ಥಿಗಳು ತಮ್ಮ ಹೆಸರು, ವಿಳಾಸ, ಮೊಬೈಲು ಸಂಖ್ಯೆ ಮತ್ತು ವಿದ್ಯಾರ್ಹತೆಯನ್ನು ಬಿಳಿ ಹಾಳೆಯಲ್ಲಿ ಬರೆದು ಡಿ.26ರೊಳಗೆ ಭಾರತೀಯ ವಿಕಾಸ ಟ್ರಸ್ಟ್, ಅನಂತ, ಪೆರಂಪಳ್ಳಿ, ಅಂಬಾಗಿಲು ರಸ್ತೆ, ಕುಂಜಿಬೆಟ್ಟು ಅಂಚೆ, ಉಡುಪಿ- 576102 ಇಲ್ಲಿಗೆ ಕಳುಹಿಸಿಕೊಡಬಹುದು. ಅಥವಾ ದೂರವಾಣಿ ಸಂಖ್ಯೆ: 0820-2570263 ಅಥವಾ 8618498274 ಸಂಪರ್ಕಿಸುವ ಮೂಲಕ ತಮ್ಮ ಭಾಗವಹಿಸುವಿಕೆಯನ್ನು ದೃಢೀಕರಿಸಬಹುದು ಎಂದು ಸಂಸ್ಥೆ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
Next Story





