ಅಲೆವೂರು ಗ್ರೂಪ್ ಆವಾರ್ಡ್ಗೆ ನ್ಯಾಯವಾದಿ ಶಾಂತಾರಾಮ್ ಶೆಟ್ಟಿ ಆಯ್ಕೆ

ಶಾಂತಾರಾಮ್ ಶೆಟ್ಟಿ
ಉಡುಪಿ, ಡಿ.21: ಅಲೆವೂರು ಗ್ರೂಪ್ ಫೋರ್ ಎಜ್ಯುಕೇಷನ್ ವತಿ ಯಿಂದ ನೀಡಲಾಗುವ 2023ನೇ ಸಾಲಿನ ಪ್ರತಿಷ್ಟಿತ ಅಲೆವೂರು ಗ್ರೂಪ್ ಅವಾರ್ಡ್ಗೆ ಖ್ಯಾತ ನ್ಯಾಯವಾದಿ ಹಾಗೂ ನೋಟರಿ ಎಂ. ಶಾಂತಾರಾಮ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಡಿ.23ರಂದು ಶನಿವಾರ ಬೆಳಿಗ್ಗೆ 9:30ಕ್ಕೆ ಅಲೆವೂರಿನ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ 19ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಎಲ್ಐಸಿ ಆಫ್ ಇಂಡಿಯಾದ ಉಡುಪಿ ವಿಭಾಗದ ಸೀನಿಯರ್ ಡಿವಿಜನಲ್ ಮ್ಯಾನೇಜರ್ ರಾಜೇಶ್ ವಿ. ಮುಧೋಳ್ ಅವರು ಶಾಂತಾರಾಮ್ ಶೆಟ್ಟಿ ಅವರಿಗೆ ಬೆಳ್ಳಿ ಫಲಕ ಸಹಿತ ಅಲೆವೂರು ಗ್ರೂಪ್ ಪ್ರಶಸ್ತಿ ಪ್ರದಾನ ಮಾಡಲಿರುವರು.
ವಿ4 ಡೆವಲಪರ್ಸ್ನ ಆಡಳಿತ ಪಾಲುದಾರ ಕಾರ್ತಿಕ್ ಶೆಟ್ಟಿ ಮುಖ್ಯ ಅಥಿತಿಯಾಗಿ ಪಾಲ್ಗೊಳ್ಳುವರು. ಅಲೆವೂರು ಗ್ರೂಪ್ ಫೊರ ಎಜ್ಯುಕೇಷನ್ ಅಧ್ಯಕ್ಷ ಅಲೆವೂರು ಗಣಪತಿ ಕಿಣಿ ಸಮಾರಂಭದ ಅಧ್ಯಕ್ಷತೆ ವಹಿಸಲಿರುವರು ಎಂದು ಅಲೆವೂರು ಗ್ರೂಪ್ ಫೋರ್ ಎಜ್ಯುಕೇಷನ್ ಕಾರ್ಯದರ್ಶಿ ಎ. ದಿನೇಶ್ ಕಿಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಪಿ.ರವೀಂದ್ರ ನಾಯಕ್, ಮುರಾರಿ ಬಲ್ಲಾಳ್(ಮರಣೋತ್ತರ), ರಮೇಶ್ ರಾವ್, ಡಾ. ರಮಾನಂದ ಭಟ್ (ಮರಣೋತ್ತರ), ಡಾ. ಯು.ಎಮ್. ವೈದ್ಯ, ಡಾ. ಮೋಹನ್ ಆಳ್ವಾ, ಶಿರ್ತಾಡಿ ವಿಲಿಯಂ ಪಿಂಟೋ, ಸಾರಾ ಅಬೂಬಕ್ಕರ್, ಡಾ.ಪ್ರತಾಪ್ ಕುಮಾರ್, ಪ್ರೊ. ಎಂ.ಡಿ.ನಂಜುಡ, ಡಾ. ಪಿ.ವಿ. ಭಂಡಾರಿ, ಡಾ. ಎನ್.ಎ.ಮಧ್ಯಸ್ಥ, ಎ. ಈಶ್ವರಯ್ಯ, ಡಾ. ವೈ.ಎನ್. ಶೆಟ್ಟಿ, ಪ್ರೊ. ಪ್ರಹ್ಲಾದ ಆಚಾರ್ಯ, ಪ್ರೊ. ಮ್ಯಾಥ್ಯೂ ಸಿ. ನೈನನ್, ಡಾ.ಎ.ಪಿ. ಭಟ್, ಪ್ರೊ. ಉದ್ಯಾವರ ಮಾಧವ ಆಚಾರ್ಯ, ಡಾ. ಶಶಿಕಿರಣ್ ಉಮಾಕಾಂತ್ ಇವರಿಗೆ ಅಲೆವೂರು ಗ್ರೂಪ್ ಅವಾರ್ಡ್ ನೀಡಿ ಗೌರವಿಸಲಾಗಿತ್ತು.







