ಅಶ್ವಥ ಎಲೆಯಲ್ಲಿ ಮೂಡಿಬಂದ ಪುತ್ತಿಗೆಶ್ರೀ

ಉಡುಪಿ, ಡಿ.22: 2024ರ ಜ.18ರಂದು ನಾಲ್ಕನೇ ಬಾರಿಗೆ ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಪೀಠ ಅಲಂಕರಿಸಲಿರುವ ಉಡುಪಿ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರ ರೇಖಾಚಿತ್ರವನ್ನು ಕಲಾವಿದ, ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ಅವರು ಅಶ್ವಥ ಮರದ ಎಲೆಯಲ್ಲಿ ಮೂಡಿಸಿದ್ದಾರೆ.
ಸರಿಸುಮಾರು ಒಂದು ತಿಂಗಳುಗಳ ಕಾಲ ಅಶ್ವಥ ಎಲೆಯನ್ನು ನೀರಿನಲ್ಲಿ ನೆನೆಸಿಟ್ಟು ನಂತರ ಸ್ವಾಮೀಜಿಯ ರೇಖಾಚಿತ್ರವನ್ನು ಅವರು ರಚಿಸಿದ್ದಾರೆ. ಈ ಅಶ್ವಥ ಎಲೆಯನ್ನು ಬಾರ್ಕೂರು ಸಮೀಪದ ಬೆಣ್ಣೆಕುದುರಿನ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದ ಬಳಿ ಇರುವ ಅಶ್ವತ ಮರದಿಂದ ತೆಗೆದುಕೊಳ್ಳಲಾಗಿದೆ ಎಂದು ಸರಳೇಬೆಟ್ಟು ತಿಳಿಸಿದ್ದಾರೆ.
ಪುತ್ತಿಗೆಶ್ರೀಗಳನ್ನು ಉಡುಪಿಯಲ್ಲಿ ನಡೆಯುವ ಪುರಪ್ರವೇಶದ ಸಂದರ್ಭದಲ್ಲಿ ಭೇಟಿ ಮಾಡಿ ಈ ರೇಖಾ ಚಿತ್ರವನ್ನು ಅವರಿಗೆ ನೀಡಲಿರು ವುದಾಗಿ ಸರಳೇಬೆಟ್ಟು ತಿಳಿಸಿದ್ದಾರೆ. ಗಣೇಶ ಸರಳೇಬೆಟ್ಟು ಅವರು ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇದೀಗ ಪುತ್ತಿಗೆ ಶ್ರೀಗಳ ರೇಖಾ ಚಿತ್ರವನ್ನು ಅಶ್ವಥ ಎಲೆಯಲ್ಲಿ ಬಿಡಿಸಿದ್ದಾರೆ.





