ಕಾಪುವಲ್ಲಿ ಕಿಶೋರ ಯಕ್ಷಗಾನ ಪ್ರದರ್ಶನ ಉದ್ಘಾಟನೆ

ಕಾಪು, ಡಿ.22: ಯಕ್ಷಶಿಕ್ಷಣ ಟ್ರಸ್ಟ್ ಪ್ರದರ್ಶನ ಸಂಘಟನಾ ಸಮಿತಿ ಕಾಪು ಆಯೋಜಿಸಿದ ‘ಕಿಶೋರ ಯಕ್ಷಗಾನ-2023’ ಕಾಪುವಿನ ಬಂಟರ ಸಂಘದ ಎದುರು ನಿರ್ಮಿಸಿದ ಕಾಪು ಲೀಲಾಧರ ಶೆಟ್ಟಿ ವೇದಿಕೆಯಲ್ಲಿ ಗುರುವಾರ ಉದ್ಘಾಟನೆಗೊಂಡಿತು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಉದ್ಯಮಿ ವಾಸುದೇವ ಶೆಟ್ಟಿ ಅವರು ಯಕ್ಷಗಾನ ಅಪೂರ್ವ ಕಲಾಪ್ರಕಾರವಾಗಿದ್ದು, ಪ್ರೌಢ ಶಾಲಾ ಮಕ್ಕಳಲ್ಲಿರುವ ಪ್ರತಿಭಾ ವಿಕಸನಕ್ಕೆ ಇದು ನೆರವಾಗುತ್ತದೆ ಎಂದರು. ಜಾನಪದ ವಿದ್ವಾಂಸರಾದ ಕೆ.ಎಲ್.ಕುಂಡಂತಾಯ ಅವರು ಶುಭಾಶಂಸನೆಗೈದರು.
ಮುಖ್ಯ ಅತಿಥಿಗಳಾಗಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಯೋಗೀಶ ಶೆಟ್ಟಿ, ಲಕ್ಷ್ಮೀಶ ತಂತ್ರಿ ಭಾಗವಹಿಸಿದ್ದರು.ವೇದಿಕೆಯಲ್ಲಿ ಪ್ರಭಾತ ಶೆಟ್ಟಿ, ಶ್ರೀಕರ ಶೆಟ್ಟಿ, ಯು.ಎಸ್. ರಾಜಗೋಪಾಲ ಆಚಾರ್ಯ, ವಿದ್ಯಾಪ್ರಸಾದ್ ಉಪಸ್ಥಿತರಿದ್ದರು.
ವಿ.ಜಿ. ಶೆಟ್ಟಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿ ದರು. ಎಚ್.ಎನ್ ಶೃಂಗೇಶ್ವರ್, ನಟರಾಜಉಪಾಧ್ಯಾಯ ಸಹಕರಿಸಿದರು.
ಕಾಪುವಿನಲ್ಲಿ ಒಟ್ಟು 15 ಶಾಲೆಗಳ ಪ್ರದರ್ಶನ ನಡೆಯಲಿದ್ದು, ಡಿಸೆಂಬರ್ 24ರವರೆಗೆ ಇಲ್ಲಿ ಮತ್ತು ಡಿ.25ರಿಂದ 29ರವರೆಗೆ ಶಿರ್ವ ಸಾರ್ವಜನಿಕ ಗಣೇಶೋತ್ಸವ ವೇದಿಕೆ ಬಳಿಯ ಮಹಿಳಾ ಸೌಧದಲ್ಲಿ ಪ್ರದರ್ಶನಗಳು ಜರಗಲಿದೆ.







