ಬೈಕ್ ಅಪಘಾತ: ಶಿಕ್ಷಕ ಮೃತ್ಯು

ಬೈಂದೂರು, ಡಿ.22: ಬೈಂದೂರು ಸಾಯಿ ಕಾಂಪ್ಲೆಕ್ಸ್ ಬಳಿ ಡಿ.21ರಂದು ಸಂಜೆ ವೇಳೆ ಸಂಭವಿಸಿದ ಬೈಕ್ ಅಪಘಾತದಲ್ಲಿ ಶಿಕ್ಷಕರೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ತೊಂಡ್ಲೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ, ಮಯ್ಯಾಡಿ ನಿವಾಸಿ ಗೋವಿಂದ ರಾಯ(57) ಎಂದು ಗುರುತಿಸಲಾಗಿದೆ. ಇವರು ಬೈಂದೂರು ನ್ಯೂ ಬಸ್ ನಿಲ್ದಾಣದ ಕಡೆಯಿಂದ ಬೈಂದೂರು ಪೇಟೆ ಕಡೆಗೆ ಸರ್ವಿಸ್ ರಸ್ತೆಯಲ್ಲಿ ರವಿರಾಜ್ ಮಾಸ್ಟರ್ ಎಂಬವರನ್ನು ಬೈಕಿನಲ್ಲಿ ಕುಳ್ಳಿರಿಸಿಕೊಂಡು ಹೋಗುತ್ತಿದ್ದು, ಈ ವೇಳೆ ಬೈಕ್ ರಸ್ತೆ ಬದಿಯ ಗೋಡೆಗೆ ಡಿಕ್ಕಿ ಹೊಯಿತ್ತೆನ್ನಲಾಗಿದೆ.
ಈ ವೇಳೆ ಎದ್ದು ಕುಳಿತು ಗೋವಿಂದ ರಾಯರು ಅಲ್ಲೇ ಕುಸಿದು ಬಿದ್ದು ಮೃತಪಟ್ಟರು. ಇವರು ಬೈಕಿನಿಂದ ಬಿದ್ದು ಗಾಯ ಗೊಂಡು ಅಥವಾ ಹೃದಯಾಘಾತದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





